ಕೊಲಂಬೊ: ಶ್ರೀಲಂಕಾಗೆ ಭೇಟಿ ನೀಡುವ ಮುನ್ನವೇ ಎಲ್ಲ ಪ್ರವಾಸಿಗರು ಎಲೆಕ್ಟ್ರಾನಿಕ್ ಪ್ರಯಾಣ ದೃಢೀಕರಣ (ಇಟಿಎ) ಹೊಂದುವುದು ಕಡ್ಡಾಯವಾಗಿದೆ.
ಅಕ್ಟೋಬರ್ 15ರಿಂದಲೇ ಈ ನಿಯಮ ಅನ್ವಯವಾಗಲಿದೆ ಎಂದು ಶ್ರೀಲಂಕಾ ಸರ್ಕಾರದ ವಲಸೆ ವಿಭಾಗದ ಪ್ರಕಟಣೆ ತಿಳಿಸಿದೆ.
ಈ ಹಿಂದೆ ಅನ್ವಯವಾಗುತ್ತಿದ್ದ ಇಟಿಎ ಅನ್ನು ಹೊಸದಾದ 2024ರ ಏಪ್ರಿಲ್‌ನಲ್ಲಿ ಜಾರಿಗೆ ತರಲಾದ ಇ-ವೀಸಾ ಫ್ಲ್ಯಾಟ್‌ಫಾರ್ಮ್‌ನಿಂದ ಬದಲಾಯಿಸಲಾಗಿತ್ತು.
ಆದರೆ, ನಾಲ್ಕು ತಿಂಗಳ ನಂತರ ಹೊಸ ಫ್ಲ್ಯಾಟ್‌ಫಾರ್ಮ್ ಅನ್ನು ಸುಪ್ರೀಂಕೋರ್ಟ್ ಅಮಾನತುಗೊಳಿಸಿತ್ತು. ಅಲ್ಲದೇ, ಹಳೆಯ ಇಟಿಎ ವ್ಯವಸ್ಥೆಯನ್ನೇ ಪುನರ್ ಸ್ಥಾಪಿಸಿತ್ತು.
ನ್ಯಾಯಾಲಯದ ಆದೇಶವನ್ನು ಪಾಲಿಸದೇ, ನ್ಯಾಯಾಂಗ ನಿಂದನೆ ಮಾಡಿದ ಆರೋಪದ ಮೇಲೆ ಕಳೆದ ತಿಂಗಳು ವಲಸೆ ವಿಭಾಗದ ಮುಖ್ಯಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗಿತ್ತು.




