ತಿರುವನಂತಪುರಂ: ಎಚ್.ಎಲ್.ಎಲ್. ಲೈಫ್‍ಕೇರ್ ಲಿಮಿಟೆಡ್ ಟ್ರಾನ್ಸ್‍ಜೆಂಡರ್ ಸಮುದಾಯವನ್ನು ಸಬಲೀಕರಣಗೊಳಿಸಲು 'ಏಕತ್ವ' ಯೋಜನೆಯನ್ನು ಪ್ರಾರಂಭಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಮಿನಿರತ್ನ ಸಾರ್ವಜನಿಕ ವಲಯದ ಎಚ್.ಎಲ್.ಎಲ್, ತನ್ನ ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಎಚ್.ಎಲ್.ಎಲ್ ನ ಸಾಮಾಜಿಕ ಶಿಕ್ಷಣ ಮತ್ತು ಅಭಿವೃದ್ಧಿ ಅಂಗವಾದ ಎಚ್.ಎಲ್.ಎಲ್ ಮ್ಯಾನೇಜ್‍ಮೆಂಟ್ ಅಕಾಡೆಮಿ, ನಾಡಿ ಫೌಂಡೇಶನ್‍ನ ಸಹಯೋಗದೊಂದಿಗೆ ಜಾರಿಗೆ ತಂದ ಈ ಯೋಜನೆಯು, ಉದ್ಯೋಗ ಕೌಶಲ್ಯ ತರಬೇತಿ, ಉದ್ಯಮಶೀಲತೆ ಬೆಂಬಲ ಮತ್ತು ಮಾನಸಿಕ ಆರೋಗ್ಯ ಮಧ್ಯಸ್ಥಿಕೆಗಳಂತಹ ಸೇವೆಗಳ ಮೂಲಕ ಕೇರಳದಲ್ಲಿ ಟ್ರಾನ್ಸ್‍ಜೆಂಡರ್ ಸಮುದಾಯದ ಉತ್ತಮ ಜೀವನೋಪಾಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಯೋಜನೆಯ ಉದ್ಘಾಟನೆಯನ್ನು ತಿರುವನಂತಪುರಂನ ಕಪಿನೆಸ್ ಮಾನಸಿಕ ಆರೋಗ್ಯ ಕೆಫೆ ಮತ್ತು ಚಿಕಿತ್ಸಕ ಕೇಂದ್ರದಲ್ಲಿ ಊಐಐ ಉಪಾಧ್ಯಕ್ಷ ಡಾ. ಎಸ್. ಎಂ. ಉನ್ನಿಕೃಷ್ಣನ್, ಉಪ ಉಪಾಧ್ಯಕ್ಷ ಶಮ್ನಾದ್ ಶಮ್ಸುದೀನ್ ಮತ್ತು ಏSಖಖಿಅ ಚಾಲನಾ ಶಾಲೆಯ ಪ್ರಾಂಶುಪಾಲ ಸಲೀಂ ಕುಮಾರ್ ಅವರು ನಡೆಸಿದರು. ಸಮಾರಂಭವನ್ನು ನಾಡಿ ಫೌಂಡೇಶನ್ ನಿರ್ದೇಶಕ ಪಿ.ಬಿ. ಪ್ರಬಿನ್ ಸ್ವಾಗತಿಸಿದರು.
ನಂತರ ಯೋಜನೆಯ ಫಲಾನುಭವಿಗಳಿಗೆ ಓರಿಯಂಟೇಶನ್ ಅಧಿವೇಶನ ನಡೆಯಿತು. ಯೋಜನಾ ಸಂಯೋಜಕಿ ಶಕ್ಯ ಎಸ್. ಪ್ರಿಯಂವದ ಅವರು ಯೋಜನೆಯ ಉದ್ದೇಶಗಳನ್ನು ಫಲಾನುಭವಿಗಳಿಗೆ ವಿವರಿಸಿದರು. ಇದರ ನಂತರ ವೃತ್ತಿಪರ ತರಬೇತಿ ಮತ್ತು ಜೀವನೋಪಾಯದ ಅವಕಾಶಗಳ ಕುರಿತು ಅಧಿವೇಶನಗಳು ಮತ್ತು ಫಲಾನುಭವಿಗಳಿಗಾಗಿ ಚರ್ಚಾ ಕಾರ್ಯಕ್ರಮ ನಡೆಯಿತು. ಎಲ್ಲಾ ವಿಭಾಗಗಳನ್ನು ಒಳಗೊಂಡ ಸಮಗ್ರ ಸಾಮಾಜಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಊಐಐ ನ ಬದ್ಧತೆಯ ಭಾಗವಾಗಿ 'ಏಕತ್ವ' ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.




