ನವದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಭಾನುವಾರ 'ಅತಿ ಕಳಪೆ' ಮಟ್ಟಗೆ ಜಾರಿದೆ. ತಾಪಮಾನ 15.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದು ಕಳೆದೆರಡು ವರ್ಷದಿಂದ ಅಕ್ಟೋಬರ್ ತಿಂಗಳಿನಲ್ಲಿ ದಾಖಲಾದ ಕನಿಷ್ಠ.
ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 324 ದಾಖಲಾಗಿದೆ.
ಇದು 'ಅತಿ ಕಳಪೆ'. ಶುಕ್ರವಾರ ಎಕ್ಯೂಐ 292 ಇತ್ತು. ಕಳೆದೆರಡು ದಿನ ಗಾಳಿಯ ಗುಣಮಟ್ಟ 'ಕಳಪೆ' ಮಟ್ಟದಲ್ಲಿತ್ತು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ)ಯ 'ಸಮೀರ್' ಆಯಪ್‌ನ ದತ್ತಾಂಶದ ಪ್ರಕಾರ ದೆಹಲಿಯ ಅರವಿಂದ ವಿಹಾರ 429 ಹಾಗೂ ವಜೀರ್‌ಪುರದಲ್ಲಿ 400 ಎಕ್ಯೂಐ ದಾಖಲಾಗಿದ್ದು, ಇದು 'ಗಂಭೀರ' ಮಟ್ಟದ್ದು. ನಗರದಲ್ಲಿರುವ 28 ಗಾಳಿ ಗುಣಮಟ್ಟ ಮೇಲ್ವಿಚಾರಣ ಕೇಂದ್ರಗಳಲ್ಲಿ 300ಕ್ಕೂ ಅಧಿಕ ಎಕ್ಯೂಐ ದಾಖಲಾಗಿದೆ. ಇದು 'ಅತಿ ಕಳಪೆ' ಮಟ್ಟದ್ದು.
ಕನಿಷ್ಠ ತಾಪಮಾನ 15.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಈ ಹಿಂದೆ 2023ರಲ್ಲಿ 15.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಅಕ್ಟೋಬರ್ ತಿಂಗಳ ಕನಿಷ್ಠವಾಗಿತ್ತು.




