HEALTH TIPS

ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ತುಡರ್ ಪರ್ಬ ಆಚರಣೆ

ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಪೆರಡಾಲ ಗುತ್ತು ತರವಾಡು ಮನೆಯಲ್ಲಿ ತುಡರ್ ಪರ್ಬ ಕಾರ್ಯಕ್ರಮ ಬುಧವಾರ ಜರಗಿತು. ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ್ ರೈ ಪೆರಡಾಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪೆರಡಾಲ ಗುತ್ತು ಯಜಮಾನ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮುದಾಯದ ಆಚಾರ ವಿಚಾರ, ಪರ್ವಗಳನ್ನು ಮುಂದಿನ ಸಮುದಾಯ ಪೀಳಿಗೆಗೆ ಮನವರಿಕೆ ಮಾಡುವ ಕೆಲಸ ಶ್ಲಾಘನೀಯ ಎಂದು ಅವರು ಈ ಸಂದರ್ಭ ತಿಳಿಸಿದರು. 


ಬದಿಯಡ್ಕ ಬಂಟರ ಸಂಘದ ಬಂಟ ಸಮಾಜದಲ್ಲಿ ತುಡರ್ ಪರ್ಬ ಎಂಬ ವಿಷಯದ ಬಗ್ಗೆ ರವೀಂದ್ರ ರೈ ಮಲ್ಲಾವರ ಉಪನ್ಯಾಸ ನೀಡಿ, ಬಂಟರ ಮೂಲ ಕಸುಬು ಕೃಷಿ. ಪ್ರಕೃತಿ ಆರಾಧಕರಾಗಿದ್ದರು. ಬಂಟ ಸಮುದಾಯದ ಆಚಾರ ವಿಚಾರ ಸಂಸ್ಕøತಿ, ಆಚರಣೆ ಪದ್ಧತಿಯನ್ನು ಸಮುದಾಯದ ಬಂಧುಗಳಿಗೆ ಮತ್ತು ಯುವಪೀಳಿಗೆಗೆ ತಿಳಿಸುವುದು ಅನಿವಾರ್ಯವಾಗಿದೆ. 

ಇಂದು ನಮ್ಮ ಆಚರಣೆಗಳು ಮೂಲ ವ್ಯವಸ್ಥೆಯಲ್ಲಿ ಇಲ್ಲ. ನಮ್ಮ ಯುವಕರು ಉದ್ಯೋಗದ ನಿಮಿತ್ತ ದೂರ ದೂರದ ನಗರಕ್ಕೆ ವಲಸೆ ಹೋಗಿರುವ ಕಾಲಘಟ್ಟದಲ್ಲಿ ನಮ್ಮ ಆಚರಣೆ ಪದ್ಧತಿಗಳ ಮೂಲವ್ಯವಸ್ಥೆಯನ್ನು ಈ ರೀತಿಯ ಕಾರ್ಯಕ್ರಮದ ಮೂಲಕ ಸಮುದಾಯದ ಬಂಧುಗಳಿಗೆ ತಿಳಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ರಮನಾಥ ರೈ ಮೇಗಿನ ಕಡಾರು, ಕುಂಬಳೆ ವಲಯ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಬದಿಯಡ್ಕ ಗ್ರಾಮ ಪಂಚಾಯತಿ ಕ್ಷೇಮಕಾರ್ಯ ಸಮಿತಿ ಅಧ್ಯಕ್ಷ ರವಿ ಕುಮಾರ್ ರೈ ಪೆರಡಾಲ ಗುತ್ತು, ಪೆರಡಾಲ ಉದನೇಶ್ವರ ದೇವಸ್ಥಾನದ ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಕೃಷ್ಣ ಶೆಟ್ಟಿ ಮೇಗಿನ ಬೆಳಿಂಜ ಶುಭ ಹಾರೈಸಿದರು.

ಪದಾಧಿಕಾರಿಗಳಾದ ಜಗನ್ನಾಥ ರೈ ಕೊರೆಕ್ಕಾನ, ಸಂತೋಷ್ ಕುಮಾರ್ ಶೆಟ್ಟಿ ಬಡಿಯಡ್ಕ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೋಶಾಧಿಕಾರಿ ದಯಾನಂದ ರೈ ವಂದಿಸಿದರು. ಪೆರಡಾಲ ಗುತ್ತು ತರವಾಡಿನಲ್ಲಿ ಬಲಿಪಾಡ್ಯಮಿ ಪ್ರಯುಕ್ತ ವೈದಿಕ ಕಾರ್ಯಕ್ರಮ, ಬಲಿಂದ್ರ ಪೂಜೆ ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries