ಬದಿಯಡ್ಕ: ತೆಂಕುತಿಟ್ಟಿನ ಖ್ಯಾತ ಭಾವ ಭಾಗವತ, ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯ ಅವರಿಗೆ 'ಸಾವಿರದ ಗಾನ ಕೋಗಿಲೆಗೆ ಸಾವಿರದ ಗೌರವ'ಕಾರ್ಯಕ್ರಮ ಅ. 28 ರಂದು ಬೆಳಗ್ಗೆ 9.30ರಿಂದ ರಾತ್ರಿ9.30ರ ವರೆಗೆ ಶ್ರೀ ಎಡನೀರು ಮಠದ ಸಭಾಂಗಣದಲ್ಲಿ ಜರುಗಲಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ವರೆಗೆ ಯಕ್ಷಗಾನದ ಖ್ಯಾತ ಹಿರಿಯ, ಕಿರಿಯ ಹಿಮ್ಮೇಳ ಕಲಾವಿದರಿಂದ ಗಾನ ಗೌರವ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ 2.30ಕ್ಕೆ ನಡೆಯುವ ನುಡಿ ಗ್ವರವ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯೊಂದಿಗೆ ಆಶೀರ್ವಚನ ನೀಡುವರು. ವೈದ್ಯ ¸ಹಿತಿ ಡಾ. ರಮಾನಂದ ಬನಾರಿ ಸಮಾರಂಭ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸುವರು. ಸಾಮಾಜಿಕ, ಸಾಂಸ್ಕøತಿಕ ಧುರೀಣ ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಯಗಿ ಭಾಗವಹಿಸುವರು. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ವಿಠಲ ಶೆಟ್ಟಿ, ತೆಂಕು ತಿಟ್ಟಿನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ಹಿರಿಯ ಹಿಮ್ಮೇಳ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಗೌರವ ಉಪಸ್ಥಿತಿರಿರುವರು.
ಯಕ್ಷಗಾನ ಕಲಾವಿದ ಎಂ.ಎಲ್ ಸಾಮಗ, ಚಿತ್ರನಟ, ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನ, ಯಕ್ಷಗಾನ ಅರ್ಥಧಾರಿ ಉಜಿರೆ ಅಶೋಕ್ ಭಟ್, ಸಂಗೀತ ವಿದ್ವಾಂಸವಿಠಲ ರಾಮಮೂರ್ತಿ, ಹಿರಿಯ ಯಕ್ಷಗಾಣ ಭಾಗವತ ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಕಲಾವಿದರಾದ ಸಂಜಯ ಕುಮಾರ್ ಗೋಣಿಬೀಡು, ಸರಪಾಡಿ ಅಶೋಕ್ ಶೆಟ್ಟಿ, ವಾಸುದೇವ ರಂಗಭಟ್ಟ ಉಪಸ್ಥಿತರಿರುವರು.
ಸಂಜೆ 5.30ಕ್ಕೆ ನಡೆಯುವ ಯಕ್ಷ ಗೌರವ ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗನ ಕಲಾವಿದರಿಂದ'ಅಕ್ಷಯಾಂಬರ ವಿಲಾಸ'ಯಕ್ಷಗಾನ ಬಯಲಾಟ ಜರಗಲಿರುವುದು.



