ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಂಸ್ಕೃತಿಕ ಭವನಕ್ಕೆ ಎಂಆರ್‍ಪಿಎಲ್ ಮಂಗಳೂರು ಸಂಸ್ಥೆಯ ಸಿಎಸ್ಸಾರ್ ಅನುದಾನದಿಂದ ಮಂಜೂರುಗೊಳಿಸಿದ್ದ ನೂತನ ಶೌಚಗೃಹ ಹಾಗೂ ಸೋಲಾರ್ ಅಳವಡಿಕೆಯ ಉದ್ಘಾಟನೆಯನ್ನು ಎಂಆರ್‍ಪಿಎಲ್ ಸಂಸ್ಥೆಯ ಎಚ್. ಆರ್. ವಿಭಾಗದ ಪ್ರಬಂಧಕ ಹರೀಶ್ ರಾವ್ ನೆರವೇರಿಸಿದರು. ಸೆಲ್ಕೋ ಸೋಲಾರ್ ಪ್ರೈವೆಟ್ ಲಿ.ಸಂಸ್ಥೆಯ ಮಹಾಪ್ರಬಂದಕರಾದ ಗುರುಪ್ರಸಾದ್ ಶೆಟ್ಟಿ ಅವರು ಸೋಲಾರ್ ವ್ಯವಸ್ಥೆಗೆ ಚಾಲನೆ ನೀಡಿದರು. ಮಾಜಸೇವಕ, ಸಿರಿಬಾಗಿಲಿನ ರವೀಂದ್ರ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅದ್ಯಕ್ಷತೆ ವಹಿಸಿದ್ದರು. ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ನಿರೂಪಿಸಿದರು.


