ಕುಂಬಳೆ: ರಾಜ್ಯ ಕೃಷಿ ಸಚಿವ ಪಿ.ಪ್ರಸಾದ್ ಅವರನ್ನು ಕಾಸರಗೋಡು ಶಾಸಕ ಎನ್.ಎ,ನೆಲ್ಲಿಕುನ್ನು ಅವರೊಂದಿಗೆ ಕಿಸಾನ್ ಸೇನೆಯ ಜಿಲ್ಲಾ ಪ್ರತಿನಿಧಿಗಳು ಗುರುವಾರ ಭೇಟಿಯಾಗಿ ಅಡಕೆ ಸಹಿತ ವಿವಿಧ ಕೃಷಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ ನೀಡಲಾಯಿತು.
ಜಿಲ್ಲೆಯ ಅಡಕೆ ಬೆಳೆ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಎಲೆಚುಕ್ಕೆ ರೋಗ ಹಾಗೂ ಉಚಿತ ವಿದ್ಯುತ್ ಸರಬರಾಜಿನ ವಿಚಾರವನ್ನು ತುರ್ತು ವಿಷಯವಾಗಿ ಮಂಡಿಸಲಾಯಿತು. ಈ ಬಗ್ಗೆ ಸಚಿವರು ತಕ್ಷಣ ರೈತರಿಗೆ ನೆರವಾಗುವ ರೀತಿಯಲ್ಲಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು.
ಕಿಸಾನ್ ಸೇನೆಯ ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಸಚಿನ್ ಕುಮಾರ್ ಎಂ.ಪಿ., ಮುಖ್ಯ ಪೋಷಕ ಕಲ್ಲಗ ಚಂದ್ರಶೇಖರ ರಾವ್, ಖಜಾಂಜಿ ರಾಜೇಂದ್ರಪ್ರಸಾದ್ ಬಿ.ಬಳಕ್ಕ, ರಾಷ್ಟ್ರೀಯ ಸಂಯೋಜಕ ವಕೀಲ. ಬಿಜು ಕೆ.ವಿ. ನಿಯೋಗದಲ್ಲಿದ್ದರು.




.jpg)
.jpg)
