ಬದಿಯಡ್ಕ: ಶಬರಿಮಲೆ ಚಿನ್ನ ಕಳವು ವಿವಾದ ಸಂಬಂಧಿಸಿ ದೇವಸ್ವಂ ಸಚಿವ ವಿ.ಎನ್.ವಾಸವನ್ ಹಾಗೂ ದೇವಸ್ವಂ ಬೋರ್ಡ್ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಗುರುವಾರ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಸಂದರ್ಭ ನಡೆದ ಪ್ರತಿಭಟನಾ ಸಭೆಯನ್ನು ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್ ಉದ್ಘಾಟಿಸಿ ಮಾತನಾಡಿ, ಕೋಟ್ಯಂತರ ಭಕ್ತರ ನಂಬಿಕೆಗಳಿಗೆ ದ್ರೋಹವೆಸಗಿದ ಸಚಿವರು ಹಾಗೂ ಬೋರ್ಡ್ ಅಧ್ಯಕ್ಷರು ಅಕ್ಷಮ್ಯ ಅಪರಾಧವೆಸಗಿದ್ದಾರೆ. ದೇವರ ಅಸ್ತಿತ್ವವನ್ನೇ ನಂಬದ ಎಡಪಕ್ಷ ಇನ್ನೆಲ್ಲಾ ದೇವಾಲಯಗಳನ್ನು ಕೊಳ್ಳೆಹೊಡೆಯದಿರದು. ಇಂತವರು ಜಬಾಬ್ದಾರಿ ವಹಿಸಬಾರದು. ಕೂಡಲೇ ರಾಜಿನಾಮೆ ನೀಡಬೇಕು ಎಂದು ತಿಳಿಸಿದರು.
ಮಂಡಲ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರಂಭದಿಂದಲೇ ಮಹಿಳಾ ಪ್ರವೇಶ ಸಹಿತ ಭಕ್ತರ ಭಾವನೆಗಳಿಗೆ ಘಾಸಿ ಎಸಗಿದ ಸರ್ಕಾರ ಇದೀಗ ಚಿನ್ನ ಕೊಳ್ಳೆಹೊಡೆದಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿರುವ ದ್ರೋಹವೆಂದು ತಿಳಸಿದರು.
ನೇತಾರರಾದ ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಎಂ.ಅಬ್ಬಾಸ್, ಚಂದ್ರಹಾಸನ್ ಮಾಸ್ತರ್, ರಾಮ ಪಟ್ಟಾಜೆ, ಕುಮಾರನ್ ನಾಯರ್, ಸಿರಿಲ್ ಡಿ'ಸೋಜ, ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್ ನಾಯರ್, ಶಾಫಿ ಗೋಳಿಯಡಿ, ರಜನಿ, ನಿಜೀಷ್.ಕೆ.ಯಂ., ವಿನ್ಸಂಟ್ ವಿದ್ಯಾಗಿರಿ ಮೊದಲಾದವರು ನೇತೃತ್ವ ನೀಡಿದರು.




.jpg)
