ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ತೂಮಿನಾಡು ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪೀಕರಿಸಿದ ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ ಯೋಜನೆಯ 11ನೇ ಕುಲಾಲ ಆಸರೆ ಸಹಾಯಹಸ್ತ ಸೇವಾ ಯೋಜನೆಯನ್ನು ಕುಲಾಲ ಸಂಘ ವರ್ಕಾಡಿ ಶಾಖೆಯ ಲೆಂಕ್ರಿಕಾಡು ಸರೋಜಿನಿ ಕುಲಾಲ್ ಅವರ ಚಿಕಿತ್ಸೆಗಾಗಿ ಜಿಲ್ಲಾ ಸಂಘದ ಪ್ರಧಾನ ಕಚೇರಿಯಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಯೋಜನೆಗೆ ಸಹಕರಿಸಿದ ಸರ್ವರಿಗೂ ಜಿಲ್ಲಾ ಕುಲಾಲ ಸಂಘ ಅಭಿನಂದನೆಗಳನನ್ನು ಸಮರ್ಪಿಸಿದೆ.


