ಕಾಸರಗೋಡು: ನಮ್ಮ ಸಾಂಸ್ಕøತಿಕ ಮೌಲ್ಯಗಳಿಗೆ ಪ್ರಾಚೀನ ಪರಂಪರೆಯಿದೆ. ಅವುಗಳನ್ನು ಸಂರಕ್ಷಿಸಿ ತಲೆಮಾರಿಗೆ ಹಸ್ತಾಂತರಿಸಲು ನಾವೆಲ್ಲಾ ಕಟಿಬದ್ದರಾಗಬೇಕು ಎಂದು ಕವಿ, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣಕ. ಉಳಿಯತ್ತಡ್ಕ ಹೇಳಿದರು.
ಕೋಟಿಕಣಿ ರಾಮನಗರ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ನಡೆದ ಕಾಸರಗೋಡು ದಸರಾ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ.ಯಶೋಧಾ ಶಶಿಧರ ತಮಟೆ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಕಾರ್ಯಗಳನ್ನು ಪ್ರಶಂಸಿಸಿದರು. ಗಡಿನಾಡಿನಲ್ಲಿ ಕನ್ನಡದ ಅಸ್ತಿತ್ವವನ್ನು ಭದ್ರಪಡಿಸಲು ಕನ್ನಡ ಸಾಹಿತ್ಯ ಮತ್ತು ಕಲೆಗಳನ್ನು ನಿರಂತರವಾಗಿ ಪೋಷಿಸಬೇಕಾಗಿದೆ ಎಂದು ಅವರು ತಿಳಿಸಿದರು.
ತಾರಾ ಎಸ್.ಜೆ.ಪ್ರಸಾದ್, ಎನ್.ಶಶಿಧರ, ಜಿ.ಪಿ.ಶ್ರೀನಿವಾಸಮೂರ್ತಿ, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ರೂವಾರಿ ಶಿವರಾಮ ಕಾಸರಗೋಡು ಶುಭಹಾರೈಸಿದರು. ಹರಿದಾಸ ಜಯಾನಂದಕುಮಾರ್ ಪ್ರಾರ್ಥಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ನಿಷ್ಮಿತಾ ಮಿಥುನ್ ಮತ್ತು ಪುರುಷೋತ್ತಮ ಭಟ್.ಕೆ. ನಿರೂಪಿಸಿದರು.
ಈ ಸಂದರ್ಭ ಬೆಂಗಳೂರಿನ ರಂಗ ಪುತ್ಥಳಿ ತಂಡದ ನಿರ್ದೇಶಕಿ ಡಾ.ಯಶೋಧಾ ಶಶಿಧರ ಅವರನನು ಗೌರವಿಸಲಾಯಿತು. ಹಿರಿಯ ರಂಗಕರ್ಮಿ ಜಯಶ್ರೀ ದಿವಾಕರ ಕಾಸರಗೋಡು ಅವರಿಗೆ ದಸರಾ ಗೌರವಾರ್ಪಣೆ ನಡೆಯಿತು.
ಬೆಂಗಳೂರಿಬನ ಕಲಾವಿದರು ಹಾಗೂ ದಿವಾಕರ ಆಶೋಕನಗರ ಅವರಿಂದ ಗೀತಾಮಾಧುರ್ಯ, ಕೊಂಡೆವೂರು ಗಾಯತ್ರಿ, ಶ್ರಾವಣ್ಯ, ಮೋಕ್ಷಪ್ರಭ ಆಚಾರ್ಯರಿಂದ ವಯೋಲಿನ ವಾದನ, ರಂಗ ಪುತ್ಥಳಿ ಯಶೋಧಾ ಪಪ್ಪೆಟ್ರಾ ಬೆಂಗಳೂರು ಅವರಿಂದ ಮಹಿಷಮರ್ಧಿನಿ ತೊಗಲು ಬೊಂಬೆಯಾಟ ಪ್ರದರ್ಶನ ನಡೆಯಿತು. ಕಾವ್ಯ ಕುಶಲ ಕನ್ನಡ ಗ್ರಾಮ ನಿರೂಪಿಸಿದರು.




