ಬದಿಯಡ್ಕ: ವಿ.ಎಚ್.ಪಿ ಬದಿಯಡ್ಕ ಪ್ರಖಂಡ ವತಿಯಿಂದ ಅ. 20 ರಂದು ನಡೆಯುವ ಗೋ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಪ್ರಖಂಡ ಅಧ್ಯಕ್ಷ ಸುನೀಲ್ ಕಿನ್ನಿಮಾಣಿ ಅವರ ಅಧ್ಯಕ್ಷತೆಯಲ್ಲಿ ಗಣೇಶ್ ಮಂದಿರದಲ್ಲಿ ಜರಗಿತು.
ವಿ.ಎಚ್.ಪಿ ಜಿಲ್ಲಾ ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕಳ ಅವರು ಪತ್ರಿಕೆ ಬಿಡುಗಡೆಗೊಳಿಸಿದರು. ಉತ್ಸವ ಸಮಿತಿ ಉಪಾಧ್ಯಕ್ಷ ತನಿಯಪ್ಪ ಬದಿಯಡ್ಕ, ವಿ.ಎಚ್.ಪಿ. ಬದಿಯಡ್ಕ ನಗರಾಧ್ಯಕ್ಷ ಶರತ್ ಶೆಟ್ಟಿ, ವಿಯಚ್ ಪಿ., ಪಂಚಾಯತಿ ಸಮಿತಿ ಅಧ್ಯಕ್ಷ ನಾರಾಯಣ.ಪಿ. ಪೆರಡಾಲ, ಉಪಾಧ್ಯಕ್ಷ ಇಂದುಶೇಖರ ವಾಂತಿಚ್ಚಾಲ್, ಹರಿರಾಮ, ಶಿವಪ್ರಸಾದ್, ಭಜರಂಗದಳ ಬದಿಯಡ್ಕ ಪ್ರಖಂಡ ಸಂಚಾಲಕ ಧನರಾಜ್, ಆರ್.ಎಸ್.ಎಸ್. ಬದಿಯಡ್ಕ ಮಂಡಲ ಕಾರ್ಯವಾಹ ವಿಜಯ ಕಿನ್ನಿಮಾಣಿ, ಸ್ವರಾಜ್. ಬದಿಯಡ್ಕ ಮಂಡಲ ಸಹ ಕಾರ್ಯವಾಹ ರಾಜೇಶ್ ವಳಮಲೆ, ಬದಿಯಡ್ಕ ಖಂಡ ಸಹ ಕಾರ್ಯವಾಹ ಚಂದ್ರಹಾಸ ಉಪಸ್ಥಿತರಿದ್ದರು. ಉತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ್ ಬದಿಯಡ್ಕ ಸ್ವಾಗತಿಸಿ, ಕೋಶಾಧಿಕಾರಿ ಗುರುಪ್ರಸಾದ್ ರೈ ವಂದಿಸಿದರು.


