ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂರಕ್ಷಣೆಯ ಅಂಗವಾಗಿ ಆಯೋಜಿಸಿದ ವಿದ್ಯುತ್ ಜಾಗೃತಿ ಎಂಬ ವಿಶೇಷ ಮುನ್ನೆಚ್ಚರಿಕಾ ತರಗತಿಯನ್ನು ಕೆ.ಎಸ್.ಇ.ಬಿಯ ಉಪ್ಪಳ ಬ್ರಾಂಚ್ ಕಾರ್ಯನಿರ್ವಾಹಕ ಇಂಜಿನಿಯರ್ ಜಯನ್ ಉದ್ಘಾಟಿಸಿದರು. ಸಹಾಯಕ ಇಂಜಿನಿಯರ್ ಅನೀಶ್ ತರಗತಿ ನಡೆಸಿಕೊಟ್ಟರು. ಓವರ್‍ಸಿಯರ್ ಶಾಜಿ, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯುತ್ ಬಳಕೆ ಮತ್ತುಸಂರಕ್ಷಣೆಯ ಅನಿವಾರ್ಯತೆಯನ್ನು ತಿಳಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಸ್ವಾಗತಿಸಿ, ಐಶ್ವರ್ಯ ವಂದಿಸಿದರು.

.jpg)
