ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಾಲಾ ವಿಜ್ಞಾನ ಮೇಳದ ಸಮಾರೋಪ ಸಮಾರಂಭ ಶ್ರೀವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ ಕೆ, ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಬ್ಲಾಕ್ ಪಂಚಾಯಿತಿ ಸದಸ್ಯರಾದ ರಾಧಾಕೃಷ್ಣ ಕೆ ವಿ, ಡಾ. ಮುರಳಿ ಪಿ ಎಸ್, ಪ್ರಸನ್ನ ಡಿಸೋಜ ಸಿಂತಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್, ಪ್ರಾಂಶುಪಾಲ ವಿಜಯಕುಮಾರ್, ಪ್ರಾಂಶುಪಾಲರ ವೇದಿಕೆಯ ಕಾರ್ಯದರ್ಶಿ ರಮೇಶ್ ಕೆಎನ್ ಮುಖ್ಯೋಪಾಧ್ಯಾಯರ ವೇದಿಕೆಯ ಕಾರ್ಯದರ್ಶಿ ಶ್ಯಾಮ್ ಭಟ್, ವರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಲತೀಫ್ ಎಂ, ಶಿವರಾಜ್ ಕುಮಾರ್, ಶಾಲಾ ಪಿಟಿಎ ಅಧ್ಯಕ್ಷ ಅಬ್ದುಲ್ ಮಜೀದ್ ಉಪಾಧ್ಯಕ್ಷ ಮೋಹನ್ ಬಿ, ಲೋಹಿತ್ ಜೆ, ಎಂ ಪಿ ಟಿ ಅಧ್ಯಕ್ಷೆ ನಬಿಸಾ, ಎನ್‍ಎಂಸಿ ಅಧ್ಯಕ್ಷ ಹರ್ಷ ಕುಮಾರ ಪತ್ತೂರಾಯ, ಪಿಟಿಎ ಸದಸ್ಯ ಹಮೀದ್ ಕಣಿಯೂರು, ಅಬ್ದುಲ್ ಅಜೀಜ್, ಶ್ರೀ ಅಹಮದ್‍ಕುಞÂ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕಿ ಕೃಷ್ಣವೇಣಿ ಟೀಚರ್ ಸ್ವಾಗತಿಸಿದರು. ವನಿತಾ ಟೀಚರ್ ಮತ್ತು ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ವಾಣಿ ವಿಜಯ ಎಯುಪಿ ಶಾಲೆಯ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಭಟ್ ವಂದಿಸಿದರು.


