ಪೆರ್ಲ: ಪೆರ್ಲದ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ದತ್ತಿ ನಿಧಿ ಕಾರ್ಯಕ್ರಮದ ಅಂಗವಾಗಿ ಮುಂಡಿತಡ್ಕ ಪ್ರಾದೇಶಿಕ ಸಮಿತಿ ಸಂಗ್ರಹಿಸಿದ ಮೊತ್ತವನ್ನು ಇತ್ತೀಚಿಗೆ ನಿಧನರಾದ ಸಂಘದ ಸದಸ್ಯ, ಬಜಕೂಡ್ಲು ನಡುಬೈಲು ದಿ.ಪುರುಷೋತ್ತಮ ಪೂಜಾರಿ ಅವರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರ ಪತ್ನಿ ಚಂದ್ರಾವತಿ ಅವರಿಗೆ ಹಸ್ತಾಂತರಿಸಲಾಯಿತು. ಮುಂಡಿತ್ತಡ್ಕ ಪ್ರಾದೇಶಿಕ ಸಮಿತಿ ಅಧ್ಯಕ್ಷ ಪೂವಪ್ಪ ಪೂಜಾರಿ ಅವರು ಧನ ಸಹಾಯ ಹಸ್ತಾಂತರಿಸಿದರು. ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಬಿ. ಪಿ. ಶೇಣಿ, ಕೇಂದ್ರ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಕುಮಾರ್, ಮುಂಡಿತಡ್ಕ ಸಮಿತಿ ಕಾರ್ಯದರ್ಶಿ ಉಮಲತಾ ಮುಗು, ಕೋಶಾಧಿಕಾರಿ ಲೋಹಿತ್ ಮುಗು, ಬೆದ್ರಂಪಳ್ಳ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಮಾಸ್ಟರ್ ನಡುಬೈಲು, ವಿನಯ ಕುಕ್ಕಿಲ ಉಪಸ್ಥಿತರಿದ್ದರು.


