ಬದಿಯಡ್ಕ: ರಾಷ್ಟ್ರೀಯ ಸ್ವಯಂಸೇವಕ ಸಂಘ ಬದಿಯಡ್ಕ ಮಂಡಲ ವಿಜಯದಶಮಿ ಉತ್ಸವ ಭಾನುವಾರ ನವಜೀವನ ಶಾಲಾ ಮೈದಾನದಲ್ಲಿ ಜರಗಿತು. ಮಾನನೀಯ ಖಂಡ್ ಸಂಘಚಾಲಕ್ ರಮೇಶ್ ಕಳೇರಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ರಾಜೇಶ್ ಸಿ.ಎಚ್.ಚಂಬಲ್ತಿಮಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿವೃತ್ತ ವಿಭಾಗ ಪ್ರಚಾರಕ, ಸಾಮಾಜಿಕ ಕಾರ್ಯಕರ್ತ ನವೀನ ಸುಬ್ರಹ್ಮಣ್ಯ ಬೌದ್ಧಿಕ್ ನಡೆಸಿಕೊಟ್ಟರು. ಗಣವೇಷಧಾರಿ ಸ್ವಯಂಸೇವಕರಿಂದ ಬದಿಯಡ್ಕ ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಸ್ವಯಂಸೇವಕರು ಶಾರೀರಿಕ ಪ್ರದರ್ಶನ ನೀಡಿದರು.




.jpg)
