ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ)ವಾರ್ಷಿಕ ಮಹಾಸಭೆ ಐಎಂಎ ಹೌಸ್‍ನಲ್ಲಿ ಜರುಗಿತು. ಸಂಘಟನೆ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ. ರಮೇಶ್ ಆರ್ ಸಮಾರಂಭ ಉದ್ಘಾಟಿಸಿದರು. ರಾಜ್ಯ ಸಮಿತಿ ಮಾಜಿ ಅಧ್ಯಕ್ಷ ಡಾ. ಜೋಸೆಫ್ ಬೆನವೆಂಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಡಾ. ಹರಿ ಕಿರಣ್ ಬಂಗೇರಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಅಣ್ಣಪ್ಪ ಕಾಮತ್ ಮತ್ತು ಕೋಶಾಧಿಕಾರಿ ಡಾ. ಅನೂಪ್ ಎಸ್ ವರದಿ ಮಂಡಿಸಿದರು. ಐಎಂಎ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ನಾರಾಯಣ ನಾಯ್ಕ್ ಬಿ, ಕಾಞಂಗಾಡು ಐಎಂಎ ಶಾಖೆಯ ಅಧ್ಯಕ್ಷ ಡಾ.ಶಶಿಧರ ರಾವ್, ವಿಮಾ ಅಧ್ಯಕ್ಷೆ ಡಾ.ಮಾಯಾ ಮಲ್ಯ, ಡಾ.ಜಿತೇಂದ್ರ ರೈ, ಡಾ.ಜನಾರ್ದನ ನಾಯ್ಕ್ ಸಿ. ಎಚ್ ಉಪಸ್ಥಿತರಿದ್ದರು. ಡಾ. ಪ್ರಜ್ಯೋತ್ ಶೆಟ್ಟಿ ಮತ್ತು ಡಾ. ಶ್ರೀಕರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ 2025-26ನೇ ಸಾಲಿನ ಐಎಂಎ ಶಾಖೆಯ ನೂತನ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಡಾ. ರೇಖಾ ರೈ ಅಧ್ಯಕ್ಷೆ, ಡಾ. ಜಮಾಲ್ ಅಹ್ಮದ್ ಎ, ಡಾ. ನಬಿಸಾ ಉಪಾಧ್ಯಕ್ಷರು, ಡಾ. ಅನ್ನಪ ಕಾಮತ್ ಕಾರ್ಯದರ್ಶಿ, ಡಾ. ಕೃಷ್ಣ ವಿವೇಕ್ ಜತೆ ಕಾರ್ಯದರ್ಶಿ, ಡಾ. ಸುಂದರ್ ಆನೆಮಜಲ್ ಕೋಶಾಧಿಕಾರಿ, ಡಾ. ನಾರಾಯಣ ನಾಯಕ್ ಬಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ವಿಮಾ ಐಎಂಎ ಮಹಿಳಾ ವಿಭಾಗ, ಡಾ. ಸುಧಾ ಭಟ್ ಮಹಿಳಾ ವಿಭಾಗ ಅಧ್ಯಕ್ಷೆ, ಡಾ. ಶ್ರೀಕರಿ ಕಾರ್ಯದರ್ಶಿಯಾಗಿ ಅಧಿಖಾರವಹಿಸಿಕೊಂಡರು.


