ಕಾಸರಗೋಡು: ಸಿಪಿಎಂ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಹೊಂದಿದ್ದು, ಕೃಷಿಯನ್ನು ನಾಶಮಾಡುವ ವನ್ಯಜೀವಿಗಳ ನಿಗ್ರಹಕ್ಕೆ ಪೆÇಲೀಸರಿಗೆ ಅನುಮತಿ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶಾನ್ ಜಾರ್ಜ್ ತಿಳಿಸಿದ್ದಾರೆ.
ಅವರು ವನ್ಯಜೀವಿಗಳ ತೊಂದರೆಗೆ ವೈಜ್ಞಾನಿಕ ಮತ್ತು ಸುಸ್ಥಿರ ಪರಿಹಾರ ಒದಗಿಸಿಕೊಡುವಂತೆ ಒತ್ತಾಯಿಸಿ ವೆಳ್ಳರಿಕುಂಡ್‍ನಲ್ಲಿ ಕಳೆದ 63 ದಿನಗಳಿಂದ ನಡೆಯುತ್ತಿರುವ 'ಕೃಷಿಕ ಸ್ವರಾಜ್ ಸತ್ಯಾಗ್ರಹ'ಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. ಬಿಜೆಪಿ ಎಂದಿಗೂ ಮಲೆನಾಡಿನ ಕೃಷಿಕರ ಜತೆಗಿದ್ದು, ಅವರು ಎದುರಿಸುತ್ತರಿಉವ ಸಮಸ್ಯೆಗಳ ಬಗ್ಗೆ ಕೈಜೋಡಿಸಲಿದೆ. ಪ್ರತಿ ಸಲ ಕೇಂದ್ರ ಸರ್ಕಾರವನ್ನು ದೂಷಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ರಾಜ್ಯಸರ್ಕಾರದ ಪ್ರಯತ್ನ ಫಲಕಾರಿಯಾಗದು ಎಂದು ಶಾನ್ ಜಾರ್ಜ್ ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಪ್ರಾದೇಶಿಕ ಸಮಿತಿ ಉಪಾಧ್ಯಕ್ಷ ಕೆ. ನಿತ್ಯಾನಂದನ್, ಕೃಷಿಕ ಮೋರ್ಚಾ ಜಿಲ್ಲಾಧ್ಯಕ್ಷ ಸುಕುಮಾರನ್ ಕಾಲಿಕಡವು ಮತ್ತು ಉತ್ತಮನ್ ಉಪಸ್ಥಿತರಿದ್ದರು.





