ಆರೋಪಿಯ ಕಸ್ಟಡಿ ವಿಚಾರಣೆಗೆ ಕೋರಿ ಎನ್‌ಐಎ ಸಲ್ಲಿಸಿದ ಅರ್ಜಿಯನ್ನು ಪ್ರಾಥಮಿಕ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಮೂರ್ತಿ ಅಂಜು ಬಜಾಜ್ ಚಂದನ ಅವರು ಪುರಸ್ಕರಿಸಿದರು.
ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿತ್ತು.
ಕಾಶ್ಮೀರದ ನಿವಾಸಿಯಾಗಿರುವ ವಾನಿಯನ್ನು ಶ್ರೀನಗರದಿಂದ ಸೋಮವಾರ ಬಂಧಿಸಲಾಗಿತ್ತು.
ದಿಲ್ಲಿ ಕಾರು ಸ್ಪೋಟದಲ್ಲಿ ವಾನಿ ತಾಂತ್ರಿಕ ನೆರವು ನೀಡಿದ್ದಾನೆ ಎಂದು ತನಿಖೆಯಲ್ಲಿ ಕಂಡು ಬಂದಿದೆ. ಕಾರು ಸ್ಫೋಟಕ್ಕೆ ಮುನ್ನ ಆತ ಡ್ರೋನ್‌ಗಳನ್ನು ಮಾರ್ಪಡಿಸಿದ್ದಾನೆ ಹಾಗೂ ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
''ಜಮ್ಮು ಹಾಗೂ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಖಾಝಿಗುಂಡದ ನಿವಾಸಿಯಾಗಿರುವ ಆರೋಪಿ ದಾಳಿಯ ಹಿಂದಿನ ಸಕ್ರಿಯ ಸಹ ಪಿತೂರಿಗಾರನಾಗಿದ್ದ. ಈ ದಾಳಿಯನ್ನು ಯೋಜಿಸಲು ಆತ ಆರೋಪಿ ಉಮರ್ ಉನ್ ನಬಿಯೊಂದಿಗೆ ಸೇರಿ ಕೆಲಸ ಮಾಡಿದ್ದ'' ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.




