ಮನಿಲಾ,: ಫಿಲಿಪ್ಪೀನ್ಸ್ ನ ಮಧ್ಯದ ರಾಜ್ಯಗಳಿಗೆ ಬುಧವಾರ ಚಂಡಮಾರುತ 'ಕಲ್ಮೇಗಿ' ಅಪ್ಪಳಿಸಿದ್ದು ಕನಿಷ್ಠ 114 ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಇದರ ಬೆನ್ನಿಗೇ, ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಗುರುವಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಹೆಚ್ಚಿನವರು ದಿಢೀರ್ ಪ್ರವಾಹದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 127 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ. ಸೆಬು ರಾಜ್ಯವು ಚಂಡಮಾರುತದ ಹೆಚ್ಚಿನ ಪ್ರಕೋಪಕ್ಕೆ ಒಳಗಾಗಿದೆ. ಚಂಡಮಾರುತವು ಫಿಲಿಪ್ಪೀನ್ಸ್ ಮೂಲಕ ಹಾದು ದಕ್ಷಿಣ ಚೀನಾ ಸಮುದ್ರವನ್ನು ತಲುಪಿದೆ.




