HEALTH TIPS

ಅಮೆರಿಕ ರಾಜಕೀಯದಲ್ಲಿ ಹೊಸ ಯುಗ: ಮಮ್ದಾನಿ ಗೆಲುವಿಗೆ ಭಾರತೀಯ ಅಮೆರಿಕನ್ನರ ಹರ್ಷ

ನ್ಯೂಯಾರ್ಕ್: ನ್ಯೂಯಾರ್ಕ್‌ ನಗರದ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ಅವರ ಗೆಲುವಿಗೆ ಭಾರತೀಯ-ಅಮೆರಿಕನ್ ವಲಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಅವರು, 'ವಲಸಿಗರಿಗೆ ಸಿಗುತ್ತಿರುವ ಮನ್ನಣೆಯ ಸಂಕೇತ ಇದಾಗಿದೆ' ಎಂದು ಹೇಳಿದ್ದಾರೆ.

ನ್ಯೂಯಾರ್ಕ್ ಮೂಲದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕಿ ಅನು ಸೆಹಗಲ್ ಬುಧವಾರ ಮಾತನಾಡಿ, 'ಈ ಗೆಲುವಿನ ನಂತರ ಹೊಸಯುಗ ಉದಯವಾದಂತೆ ಭಾಸವಾಯಿತು' ಎಂದು ಹೇಳಿದ್ದಾರೆ.

ವಿಜಯೋತ್ಸವದ ವೇಳೆ ಜೊಹ್ರಾನ್ ಅವರು ಮಾಡಿರುವ ಭಾಷಣವು, ನ್ಯೂಯಾರ್ಕ್ ನಗರವು ಇಲ್ಲಿಗೆ ಬರುವ ಶ್ರಮಿಕರ ದುಡಿಮೆ ಮತ್ತು ಶ್ರಮದಿಂದ ರೂಪುಗೊಳ್ಳುತ್ತದೆ ಎಂಬ ವಲಸಿಗರ ಪರವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ನೆಹರೂ ಅವರನ್ನು ಉಲ್ಲೇಖಿಸುವುದರಿಂದ ಹಿಡಿದು 'ಧೂಮ್ ಮಚಾಲೆ' ಹಾಡಿನವರೆಗೆ ನಮ್ಮ ಸಮುದಾಯ ಮಾತ್ರ ಗುರುತಿಸುವ ಸಾಂಸ್ಕೃತಿಕ ಸಂಕೇತಗಳಿಂದ ಭಾಷಣವು ತುಂಬಿತ್ತು...' ಎಂದು ಅವರು ಹೇಳಿದ್ದಾರೆ.

ದಕ್ಷಿಣ ಏಷ್ಯಾ ಸಮುದಾಯದ ನಾಯಕ ಮತ್ತು ನಸ್ಸೌ ಕೌಂಟಿಯ ಮಾಜಿ ಉಪ ನಿಯಂತ್ರಣಾಧಿಕಾರಿ ದಿಲೀಪ್ ಚೌಹಾಣ್ ಅವರು ಮಮ್ದಾನಿ ಅವರನ್ನು ಅಭಿನಂದಿಸುತ್ತಾ, 'ಸಾರ್ವಜನಿಕ ಸೇವೆಗೆ ಮೀಸಲಾಗಿರುವ ಮತ್ತು ನಗರದ ಬಗ್ಗೆ ಬದ್ಧತೆಯಿರುವ ದಕ್ಷಿಣ ಏಷ್ಯಾದ ಅಮೆರಿಕನ್ ಸಹೋದ್ಯೋಗಿಯನ್ನು ನೋಡಿ ಸಂತೋಷವಾಯಿತು' ಎಂದು ಹೇಳಿದ್ದಾರೆ.

ಸಾಮುದಾಯಿಕ ಸಂಘಟನೆಯಾದ ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್‌ ಫಂಡ್, ವರ್ಜೀನಿಯಾದ ಲೆಫ್ಟಿನೆಂಟ್ ಗವರ್ನರ್ ಗಜಲಾ ಹಶ್ಮಿ ಮತ್ತು ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಸೇರಿದಂತೆ ಅಮೆರಿಕಾದಾದ್ಯಂತ ತಾನು ಅನುಮೋದಿಸಿದ 19 ಮಂದಿ ಚುನಾವಣೆಗಳಲ್ಲಿ ಗೆದ್ದಿದ್ದಾರೆ ಎಂದು ಸಂಸತ ವ್ಯಕ್ತಪಡಿಸಿದೆ.

 ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ಜೊತೆಗೆ ದಕ್ಷಿಣ ಏಷ್ಯಾ ಸಮುದಾಯದ ನಾಯಕ ದಿಲೀಪ್ ಚೌಹಾಣ್ (ಪಿಟಿಐ ಚಿತ್ರ) ದಿಲೀಪ್ ಚೌಹಾಣ್ ದಕ್ಷಿಣ ಏಷ್ಯಾ ಸಮುದಾಯದ ನಾಯಕಮಮ್ದಾನಿ ಭವಿಷ್ಯದ ಭರವಸೆಯ ಬೆಳಕಾಗಿದ್ದಾರೆ. ಅವರು ಪ್ರತಿಯೊಬ್ಬ ವಲಸಿಗರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಅವರ ಉನ್ನತಿಗಾಗಿ ಶುಭ ಹಾರೈಸುತ್ತೇನೆಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್‌ ಫಂಡ್ ಸಾಮುದಾಯಿಕ ಸಂಘಟನೆದಕ್ಷಿಣ ಏಷ್ಯಾದ ಅಮೆರಿಕನ್ನರು ಈ ದೇಶದ ರಾಜಕೀಯ ಭವಿಷ್ಯದ ಭಾಗವಾಗಿದ್ದಾರೆ ಎಂಬುವುದನ್ನು ಮಂಗಳವಾರದ ಫಲಿತಾಂಶಗಳು ಸಾಬೀತುಪಡಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries