ಮಂಜೇಶ್ವರ: ಮಂಜೇಶ್ವರ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲಾ ಮೈದಾನದಲ್ಲಿ ನ.11 ರಂದು "ಸಿಬಿಎಸ್‍ಇ ಅಂತರ-ಶಾಲಾ ಫುಟ್‍ಬಾಲ್ ಟೂರ್ನಮೆಂಟ್" ಹಮ್ಮಿಕೊಂಡಿರುವುದಾಗಿ ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ಶಾಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿ ತಿಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ 9.30 ಉದ್ಘಾಟನಾ ಕಾರ್ಯಕ್ರಮದ ಬಳಿಕ ಆರಂಭಗೊಳ್ಳಲಿರುವ ಟೂರ್ನಮೆಂಟ್ ಸಂಜೆ 3.30 ಕ್ಕೆ ಸಮಾಪ್ತಿಗೊಳ್ಳಲಿದೆ.
ವಿವಿಧ ಶಾಲೆಗಳು ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳ ಮಧ್ಯೆ ಉತ್ತಮ ಸ್ಪರ್ಧಾತ್ಮಕ ಮನೋಭಾವನೆ ಬೆಳಸುವುದು ಹಾಗೂ ಅವರ ಕ್ರೀಡಾ ಸಾಮಥ್ರ್ಯವನ್ನು ಹೆಚ್ಚಿಸುವ ಉದ್ದೇಶವಾಗಿದೆ. ಈ ಟೂರ್ನಮೆಂಟ್ ಸಿಬಿಎಸ್‍ಇ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳ ಮಧ್ಯೆ ನಡೆಯಲಿದೆ. ಪ್ರತಿ ತಂಡವು ಎಷ್ಟು ಆಟಗಾರರನ್ನು ಕಣಕ್ಕಿಳಿಸಬೇಕು, ಆಟದ ನಿಯಮಗಳು, ಪಂದ್ಯಗಳ ವ್ಯವಸ್ಥೆ ಹಾಗೂ ಇತರ ವಿವರಗಳು ನಿಗದಿತವಾಗಿದೆ. ಟೂರ್ನಮೆಂಟ್‍ನಲ್ಲಿ ಭಾಗವಹಿಸುವ ಶಿಕ್ಷಕರು ಹಾಗೂ ಆಡಳಿತಾಧಿಕಾರಿಗಳು ವಿದ್ಯಾರ್ಥಿಗಳ ಶಿಸ್ತಿನ ಮೇಲೂ ಗಮನಹರಿಸಿಕೊಳ್ಳುವರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇವಲ ದೈಹಿಕ ವಿಕಸನ ಮಾತ್ರವಲ್ಲದೆ, ಮಾನಸಿಕ ಸಾಮಥ್ರ್ಯ ಮತ್ತು ತಂಡ ಕಾರ್ಯಾಚರಣೆಯ ದೈವಿಕ ಪ್ರಯೋಜನಗಳನ್ನು ಒದಗಿಸುವುದು ಕ್ರೀಡೆಗಳ ಹಿರಿಮೆಯಾಗಿದ್ದು ತಮ್ಮ ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಪ್ರಾಂಶುಪಾಲರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಲಾ ಅಧ್ಯಾಪಕರುಗಳಾದ ಫಹದ್, ಎ.ಎಂ. ಹನೀಫ್ ಉಪಸ್ಥಿತರಿದ್ದರು.




.jpg)
