ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕಾಸರಗೋಡು, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಾನ್ಯ ಪರಿಸರದಲ್ಲಿ ಸಂಸಾರ ಕಲಾತಂಡ ಜೋಡುಮಾರ್ಗ ಬಳಗದವರಿಂದ ಬೀದಿ ನಾಟಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದರಾದ ಮೌನೇಶ್ ಬಳಗದವರು ಬೀದಿ ನಾಟಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನೀರಿನ ಸದ್ಬಳಕೆ, ಮೊಬೈಲ್ ಬಳಕೆಯ ದುಷ್ಪರಿಣಾಮ, ಸಂಚಾರಿ ನಿಯಮ ಪಾಲನೆ, ಮಧುಮೇಹ, ಹೃದಯ ಸಂಬಂಧಿಸಿದ ಖಾಯಿಲೆ, ಕ್ಯಾನ್ಸರ್, ರೋಗಗಳು, ಹಸಿ ಕಸ-ಒಣ ಕಸ ವಿಂಗಡಣೆ ಮುಂತಾದ ಬಗ್ಗೆ ಸಂದೇಶ ಜಾಗೃತಿ ಮೂಡಿಸುವ ಜಾಗೃತಿ ಗೀತೆಯೊಂದಿಗೆ ಬೀದಿ ನಾಟಕವನ್ನು ಕಲಾವಿದರು ನಡೆಸಿಕೊಟ್ಟರು.




.jpg)
