ಕಾಸರಗೋಡು: ನಗರದ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳು ಕಾಸರಗೋಡು ನಗರ ಠಾಣೆಯನ್ನು ಸಂದರ್ಶಿಸಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಶಾಲಾ ಸಂಸ್ಥೆಯ ಸಲಹೆಗಾರ ಹಾಗೂ ಟ್ರೋಮಾಕೇರ್ ಪೆÇೀಲೀಸ್ ಒಲಿಯಂಟಿಯರ್‍ನ ಉಪಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಅವರ ನೇತೃತ್ವದಲ್ಲಿ ಭೇಟಿ ಆಯೋಜಿಸಲಾಗಿತ್ತು.
ನಗರ ಠಾಣೆ ಇನ್ಸ್‍ಪೆಕ್ಟರ್ ಓಫ್ ಪೆÇೀಲೀಸ್ ನಳಿನಾಕ್ಷನ್ ಅವರು ತರಗತಿ ನಡೆಸಿ, ಕೈದಿಗಳನ್ನು ಕೂಡಿಹಾಕುವ ಲಾಕಪ್, ಪೆÇೀಲೀಸ್ ನಿಯಮ, ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದರು. ಸಬ್ ಇನ್ ಸ್ಪೆಕ್ಟರ್ ಅನ್ಸಾರ್ ಅವರು ಪೆÇೀಲೀಸ್ ಆಯುಧಗಳು, ಟಿಯರ್ ಗ್ಯಾಸ್, ಹ್ಯಾಂಡ್ ಕಪ್ ಇದರ ಉಪಯೋಗ ಹಾಗೂ ಮಹತ್ವದ ಮಾಹಿತಿಯನ್ನು ಮಕ್ಕಳಿಗೆ ಒದಗಿಸಿದರು. ಸೋಷಿಯಲ್ ಪೆÇೀಲೀಸ್ ಡಿವಿಷನ್ ಜಿಲ್ಲಾ ಕೋರ್ಡಿನೇಟರ್ ಪಿ.ಕೆ. ರಾಮಕೃಷ್ಣನ್ ಅವರು ಚೈಲ್ಡ್ ಲೈನ್, ಮಾದಕ ದ್ರವ್ಯ, ಮಕ್ಕಳಿಗೆ ಪೆÇೀಲೀಸರಿಂದ ಬೇಕಾದ ಸಹಾಯ, ಕಾನೂನು ವ್ಯವಸ್ಥೆ ಬಗ್ಗೆ ಸರಳ ಹಾಗೂ ವಿಸ್ತಾರವಾಗಿ ಮಾಹಿತಿ ನೀಡಿದರು. ಈ ಸಂದರ್ಭ ಎಸ್.ಐ ಗಳಾದ ರಾಜೀವನ್, ಶಶಿಧರನ್, ವನಿತಾ ಎಸ್ ಐ ಸೌಪುನಿ, ಜನ ಮೈತ್ರಿ ಪೆÇೀಲೀಸ್ ಶ್ರೀಜಿತ್, ಶಾಲಾ ಮುಖ್ಯಶಿಕ್ಷಕಿ ಲೀಲಾವತಿ ನಾಯರ್, ಶಾಲಾ ಪಿಟಿಎ ಕೋಶಾಧಿಕಾರಿ ಪ್ರಕಾಶ್, ಶಿಕ್ಷಕಿಯರಾದ ರಾಧಾಮಣಿ, ಪವಿಳ, ಅನಿತ ಉಪಸ್ಥಿತರಿದ್ದರು. ಜನಮೈತ್ರಿ ಪೆÇೀಲೀಸ್ ವತಿಯಿಂದ ವಿದ್ಯಾರ್ಥಿಗಳಿಗೆ ಉಪಾಹಾರ ವಿತರಿಸಿ ಬೀಳ್ಕೊಟ್ಟರು.





