ಕಾಸರಗೋಡು: ಕೇರಳದಲ್ಲಿ ಪತ್ರಕರ್ತರ ಪಿಂಚಣಿಯನ್ನು ಸಕಾಲದಲ್ಲಿ ಪರಿಷ್ಕರಿಸಿ 15ರಿಂದ 20 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಕೇರಳ ಪತ್ರಕರ್ತರ ಒಕ್ಕೂಟದ ಜಿಲ್ಲಾ ವಾರ್ಷಿಕ ಮಹಾಸಭೆ ಒತ್ತಾಯಿಸಿದೆ.
ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ವಿಜೇಶ್ ಸಮಾರಂಭ ಉದ್ಘಾಟಿಸಿದರು. ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ನಾರಾಯಣನ್ ವರದಿ ಮತ್ತು ಕೋಶಾಧಿಕಾರಿ ಸುರೇಂದ್ರನ್ ಮಡಿಕೈ ಲೆಕ್ಕಪತ್ರ ಮಂಡಿಸಿದರು.ಫೈಸಲ್ ಬಿನ್ ಅಹಮದ್ ಮತ್ತು ರಮೇಶ್ ಪಿಲಿಕೋಡ್ ನಿರ್ಣಯ ಮಂಡಿಸಿದರು. ಕಾಸರಗೋಡು ಪ್ರೆಸ್‍ಕ್ಲಬ್ ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ, ಜತೆಕಾರ್ಯದರ್ಶಿ ಪುರುಷೋತ್ತಮ ಪೆರ್ಲ ಉಪಸ್ಥೀತರಿದ್ದರು.
ಈ ಸಂದರ್ಭ ನಡೆದ ಚರ್ಚೆಯಲ್ಲಿ ಸದಸ್ಯರಾದ ಅಬ್ದುಲ್ ರಹ್ಮಾನ್ ಆಲೂರು, ಟಿ.ಎ. ಶಾಫಿ, ಗಂಗಾಧರ ತೆಕ್ಕೆಮೂಲೆ, ನಾರಾಯಣನ್ ಕರಿಚೇರಿ, ಇ.ವಿ. ಜಯಕೃಷ್ಣನ್, ಫಿರೋಜ್, ವೇಣುಗೋಪಾಲ, ಎ.ಪಿ.ವಿನೋದ್ ಪಾಲ್ಗೊಂಡಿದ್ದರು.





