ಎಸ್‌ಐಆರ್ 2.0 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ,ಛತ್ತೀಸ್‌ಗಡ,ಗೋವಾ,ಗುಜರಾತ್, ಕೇರಳ,ಮಧ್ಯಪ್ರದೇಶ,ಪುದುಚೇರಿ,ರಾಜಸ್ಥಾನ,ತಮಿಳುನಾಡು,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳ ಸುಮಾರು 51 ಕೋಟಿ ಮತದಾರರನ್ನು ಒಳಗೊಂಡಿರಲಿದೆ.
ಈ ಪೈಕಿ ತಮಿಳುನಾಡು,ಪುದುಚೇರಿ,ಕೇರಳ ಮತ್ತು ಪ.ಬಂಗಾಳಗಳಲ್ಲಿ ಮುಂದಿನ ವರ್ಷದ ಎಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಮಂಗಳವಾರದಿಂದ ಪ್ರಾರಂಭಗೊಂಡಿರುವ ಎಣಿಕೆ ಕಾರ್ಯವು ಡಿ.4ರವರೆಗೆ ಮುಂದುವರಿಯಲಿದ್ದು,ಚುನಾವಣಾ ಆಯೋಗವು ಡಿ.9ರಂದು ಕರಡು ಮತದಾರರ ಪಟ್ಟಿಗಳನ್ನು ಬಿಡುಗಡೆಗೊಳಿಸಲಿದೆ. ಜನರು ಮುಂದಿನ ವರ್ಷದ ಜ.8ರವರೆಗೆ ಕರಡು ಪಟ್ಟಿಯ ಕುರಿತು ಆಕ್ಷೇಪಗಳು ಮತ್ತು ಹಕ್ಕು ಕೋರಿಕೆಗಳನ್ನು ಸಲ್ಲಿಸಬಹುದು.




