ಉಪ್ಪಳ: ವಿದ್ಯಾಭ್ಯಾಸ ರಂಗದಲ್ಲಿ ತನ್ನದೇ ವಿಶೇಷತೆಗಳೊಂದಿಗೆ ಜನಮನ್ನಣೆ ಪಡೆದಿರುವ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯ 2025-26 ನೇ ಶ್ರೈಕ್ಷಣಿಕ ವರ್ಷದ ಶಾಲಾ ವಾರ್ಷಿಕ ಸ್ನೇಹ ಸಮ್ಮಿಲನ ಸಡಗರ ಸಂಭ್ರಮದೊಂದಿಗೆ ಬೇಕೂರು ಸೀ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತಾಧಿಕಾರಿ ಮೊಹಮ್ಮದ್ ಅಝೀಂ ಮಣಿಮುಂಡ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಬರಹಗಾರ ಇಸ್ಮತ್ ಪಜೀರ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕಾಸರಗೋಡು ಸಾಹಿತ್ಯ ವೇದಿಕೆಯ ಉಪಾಧ್ಯಕ್ಷ ಅಶ್ರಫ್ ಅಲಿ ಚೇರಂಗೈ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ನಿಶಾಂತ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ನೃತ್ಯ, ನಾಟಕ, ಗೀತೆಯಂತಹ ವೈವಿಧ್ಯಮಯ ಪ್ರದರ್ಶನಗಳು ಮನ್ನಣೆ ಪಡೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಇದೇ ಸಂದರ್ಭ ಶಿಕ್ಷಕರಿಗೂ ಸಿಬ್ಬಂದಿಗಳನ್ನು ಹಾಗೂ ಆಗಮಿಸಿದ ಅತಿಥಿಗಳನ್ನು ಪುರಸ್ಕರಿಸಿ ಅಭಿನಂದನೆಗಳನ್ನು ನೀಡಿ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿನಿ ರಾಬಿಯಾ ಶೇಖ್ ಸ್ವಾಗತಿಸಿ, ವಿದ್ಯಾರ್ಥಿ ಮಾಝ್ ಆದಂ ವಂದಿಸಿದರು.




.jpg)
