ಕುಂಬಳೆ: ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದೊಂದಿಗೆ ಪೊಸಡಿಗುಂಪೆಯ ನಿಸರ್ಗಧಾಮದಲ್ಲಿ ನಡೆದ ಡಾ. ಎಸ್. ಎಲ್ ಭೈರಪ್ಪನವರ ಸಂಸ್ಮರಣೆ ಹಾಗೂ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸಂಪನ್ನಗೊಂಡಿತು. ಮುಂಬೈ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಡಾ. ತಾಳ್ತಜೆ ವಸಂತಕುಮಾರ್ ಸಮಾರೋಪ ಭಾಷಣಗೈದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಕಾಶವಾಣಿಯ ನಿವೃತ್ತ
ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ಮುಖ್ಯ ಅತಿಥಿಯಾಗಿದ್ದರು. ವಿಶ್ರಾಂತ ಪ್ರಾಧ್ಯಾಪಕಿ, ವಿಮರ್ಶಕಿ ಡಾ.ಯು. ಮಹೇಶ್ವರಿ ಕಾರ್ಯಕ್ರಮದ ಅವಲೋಕನ ನಡೆಸಿದರು.
ಹಿರಿಯ ಸಾಹಿತಿ, ವೈದ್ಯ ಡಾ. ರಮಾನಂದ ಬನಾರಿಯವರನ್ನು ಹಾಗೂ ಡಾ.ಪ್ರಮೀಳಾ ಮಾಧವ್ ದಂಪತಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ನಿವೃತ್ತ ಪ್ರಾಂಶುಪಾಲ ಡಾ ಎಸ್.ಎಲ್. ಮಂಜುನಾಥ್ ಬೆಂಗಳೂರು, ಮಂಜುನಾಥ್ ಡಿ.ಎಸ್ ಬೆಂಗಳೂರು ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿ, ಶಂಪಾ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾರದಾ ಬೆಂಗಳೂರು ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪಕ್ಕೆ ಮುನ್ನ ಡಾ.ಎಸ್.ಎಲ್. ಬೈರಪ್ಪನವರ ಕೃತಿಗಳ ಕುರಿತು ವಿಚಾರ ಸಂಕಿರಣ ನಡೆಯಿತು. ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ (ಅನ್ವೇಷಣ), ಪೆರಿಯ ಕೇಂದ್ರೀಯ ವಿ.ವಿಯ ಕನ್ನಡ ಪ್ರಾಧ್ಯಾಪಕಿ ಡಾ.ಸೌಮ್ಯಾ. ಹೆಚ್ (ಮತದಾನ), ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ (ತಬ್ಬಲಿಯು ನೀನಾದೆ ಮಗನೆ), ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತಾ.ಎಸ್(ದಾಟು), ಕಾಸರಗೋಡು ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಸವಿತಾ.ಬಿ (ಗ್ರಹಣ), ಲೇಖಕಿ ಪ್ರಸನ್ನ.ವಿ. ಚೆಕ್ಕೆಮನೆ (ಧರ್ಮಶ್ರೀ), ಕುಂಜತ್ತೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಕವಿತಾ ಕೂಡ್ಲು(ಕವಲು), ರಂಗಕಲಾವಿದ ಒ. ಆರ್ ಪ್ರಕಾಶ್(ಭೀಮಕಾಯ), ಸಂಶೋಧನಾ ವಿದ್ಯಾರ್ಥಿ ಶಶಾಂಕ್ ಎಚ್.ವಿ(ಭಿತ್ತಿ), ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೋಹನ ಕುಂಟಾರು(ಇತರ ಭಾಷೆಗಳಲ್ಲಿ ಭೈರಪ್ಪನವರ ಅನುವಾದಿತ ಕೃತಿಗಳು), ಡಾ.ಪಿ ನಾಗರಾಜು ಚನ್ನಪಟ್ಟಣ, ಸೋಮನಿಂಗ ಹಿಪ್ಪರಗಿ ಪಾಲ್ಗೊಂಡರು.
ಭೈರಪ್ಪ ವಿಶ್ವಮಾನ್ಯ ಕಾದಂಬರಿಕಾರ: ತಾಳ್ತಜೆ
ಭೈರಪ್ಪನವರು ಪ್ರತಿಯೊಂದು ಕಾದಂಬರಿ ಬರೆಯುವ ಮೊದಲು ಸಾಕಷ್ಟು ತಯಾರಿ, ವ್ಯಾಪಕ ಅಧ್ಯಯನ, ತಿರುಗಾಟ, ಸಂಶೋಧನೆ ಮಾಡುತ್ತಿದ್ದರು. ಅವರು ಆಳವಾದ ಅಧ್ಯಯನ ಮತ್ತು ಜೀವನಾನುಭವಗಳನ್ನು ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಆದುದರಿಂದಲೇ ಭೈರಪ್ಪನವರ ಕಾದಂಬರಿಗಳು ಇಂಗ್ಲಿಷ್ ಮತ್ತು ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡು ಅವರನ್ನು ವಿಶ್ವಮಾನ್ಯರನ್ನಾಗಿ ಮಾಡಿದೆ.
(ಸಮಾರೋಪ ಭಾಷಣದಲ್ಲಿ ಡಾ.ತಾಳ್ತಜೆ ವಸಂತ ಕುಮಾರ್)
............................................................................................
ಭೈರಪ್ಪ ಕೃತಿಗಳ ಅವಲೋಕನ ಸ್ತುತ್ಯರ್ಹ :ಡಾ. ಬನಾರಿ
ಭೈರಪ್ಪನವರ ಎಲ್ಲಾ ಕೃತಿಗಳ ಕುರಿತಾದ ವಿಚಾರ ಸಂಕಿರಣ, ಮರು ಓದು ಸುತ್ಯರ್ಹವಾದ ಕಾರ್ಯವಾಗಿದೆ. ಶಂಪಾ ಪ್ರತಿಷ್ಠಾನದ ಈ ಕಾರ್ಯ ಅಭಿನಂದನೀಯವೆಂದು ಅಧ್ಯಕ್ಷತೆ ವಹಿಸಿದ್ದ ಡಾ.ರಮಾನಂದ ಬನಾರಿ ಹೇಳಿದರು.
...........................................................................................
ಭೈರಪ್ಪ ಅವರದ್ದು ಶಿಸ್ತು ಬದ್ಧ ಜೀವನ. ಮೂರು ನಾಲ್ಕು ದಿನ ಸೇರಿ ಎಂಟತ್ತು ಘಂಟೆ ಸಂದರ್ಶನ ನಡೆಸುವ ಅವಕಾಶ ಸಿಕ್ಕ ವೇಳೆ ಅವರ ತಾಳ್ಮೆಯಿಂದ ಪ್ರಚೋದಿತನಾದೆ. ಅವರ ಬದುಕಿನ ಹಿನ್ನೆಲೆಯಲ್ಲಿ ಹೇಳುವುದಾದರೆ ಬರೆಹಗಾರರ ಹೆಸರು ಅವರ ಕೃತಿಗಳ ಮೂಲಕ ಉಳಿಯಬೇಕು ಹೊರತು ಕೃತಿಯೇತರ ಕಾರಣಗಳಿಗಾಗಿ ಅಲ್ಲ ಎಂಬುದನ್ನು ಒತ್ತಿ ಹೇಳಬೇಕನ್ನಿಸಿದೆ.
-ಡಾ.ವಸಂತ ಕುಮಾರ ಪೆರ್ಲ(ಮುಖ್ಯಅತಿಥಿ)




.jpg)
.jpg)
