ಬದಿಯಡ್ಕ: ಮುಳ್ಳೇರಿಯ ಜಿ.ವಿ.ಎಚ್.ಎಸ್.ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವದಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಸಂಸ್ಕøತ ಕಥಾರಚನೆ ಹಾಗೂ ಸಂಸ್ಕøತ ಕಥಾಕಥನದಲ್ಲಿ ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಆರ್.ಕೆ. 'ಎ' ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಸಂಸ್ಕøತ ಗಾನಾಲಾಪನ ಹಾಗೂ ಭರತನಾಟ್ಯದಲ್ಲಿಯೂ 'ಎ' ಗ್ರೇಡ್ ಪಡೆದ ಈಕೆ ರಮೇಶ್ ಕೇರ ಮತ್ತು ಪ್ರೇಮಲತಾ ಇವರ ಪುತ್ರಿ.




.jpg)
