ಕಾಸರಗೋಡು: ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ-ರೂಪಕಲಾ ಹೊಳ್ಳ ದಂಪತಿಯನ್ನು ಕರ್ನಾಟಕದ ಖ್ಯಾತ ನಾಟಕ ತಂಡ ಕಾಸರಗೋಡಿನಲ್ಲಿ ಆಯೋಜಿಸಿತ್ತು. ವೈವಾಹಿಕ ಜೀವನದ ರಜತ ಸಂಭ್ರಮದ ಅಂಗವಾಗಿ ಇವರು ಕಾಸರಗೋಡಿಗೆ ಬೇಟಿ ನೀಡಿದ ಸಂದರ್ಭ ಸನ್ಮಾನ ಆಯೋಜಿಸಿತ್ತು. ತಿಮ್ಮಯ್ಯ ಬೆಂಗಳೂರು ಅವರು ಹೊಳ್ಳ ದಂಪತಿಗೆ ಶಾಲು ಹೊದಿಸಿ ಹಾರಾರ್ಪಣೆಗೈದು ನೆನಪಿನ ಕಾಣಿಕೆದೊಂದಿಗೆ "ರಾಷ್ಟ್ರೀಯ ಕಲಾವಿದ ಪ್ರಶಸ್ತಿ" ನೀಡಿ ಗೌರವಿಸಿದರು. ಸಂಸ್ಥೆಯ ಕಲಾವಿದರು ಉಪಸ್ಥಿತರಿದ್ದರು.





