ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ಮಕ್ಕಳ ದಿನವನ್ನು ಚೆಮ್ನಾಡಿನ ಪರವನಡುಕ್ಕಂನಲ್ಲಿರುವ 23 ನೇ ವಾರ್ಡ್‍ನ ವಿಶೇಷ ಆರೈಕೆ ಕೇಂದ್ರದಲ್ಲಿ ಆಚರಿಸಲಾಯಿತು.
"ನಾವು ನಿಮ್ಮೊಂದಿಗಿದ್ದೇವೆ" ಎಂಬ ಧ್ಯೇಯವನ್ನು ಪುಟ್ಟ ಮಕ್ಕಳ ಸುಂದರ ನಗುವಿನಲ್ಲಿ ಸೆರೆಹಿಡಿಯಲಾಯಿತು. ಘಟಕದ ಅಧ್ಯಕ್ಷ ವಸಂತ ಕೆರಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯ ಚಂದ್ರಶೇಖರನ್ ಕುಳಂಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು. ಎಕೆಪಿಎ ಸಂಯೋಜಕ ಸುಧೀಶ್ ಮಕ್ಕಳಿಗಾಗಿ ಒಂದು ಹಾಡನ್ನು ಹಾಡಿದರು. ವಿಶೇಷ ಶಿಕ್ಷಕಿ ದಿವ್ಯಾ ಟೀಚರ್, ಮಿನಿ ಟೀಚರ್, ಸ್ಪೀಚ್ ಥೆರಪಿಸ್ಟ್ ಸಿತಾರಾ, ಫಿಸಿಯೋಥೆರಪಿಸ್ಟ್ ಭಾವನಾ ಮತ್ತು ಪೆÇೀಷಕರು, ಎಕೆಪಿಎ ಜಿಲ್ಲಾ ಕ್ರೀಡಾ ಸಂಯೋಜಕ ರತೀಶ್ ರಾಮು, ಪ್ರಾದೇಶಿಕ ಸಮಿತಿ ಸದಸ್ಯ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ಮೈಂದಪ್ಪ. ಯೂನಿಟ್ ಜತೆ ಕಾರ್ಯದರ್ಶಿ ಪದ್ಮನಾಭ, ಕೋಶಾಧಿಕಾರಿ ಅಮಿತ್, ಯೂನಿಟ್ ಸಮಿತಿ ಸದಸ್ಯರಾದ ಗಣೇಶ್ ರೈ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿದರು. ವಿಶೇಷ ಆರೈಕೆ ಕೇಂದ್ರದ ವಿದ್ಯಾರ್ಥಿ ಶಿವಜಿತ್ ಕೃಷ್ಣ ವಂದಿಸಿದರು.





