ಕಾಸರಗೋಡು: ಗಡಿನಾಡು ಕಾಸರಗೋಡಿನ ಕನ್ನಡ ಚಟುವಟಿಕೆ ಸಮಸ್ತ ಕರ್ನಾಟಕಕ್ಕೆ ಮಾದರಿಯಾಗಿರುವುದಾಗಿ ಕೋಲಾರದ ಸ್ವರ್ಣಭೂಮಿ ಫೌಂಡೇಶನ್‍ನ ಬಿ.ಶಿವಕುಮಾರ್ ತಿಳಿಸಿದ್ದಾರೆ. ಅವರು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡಭವನ ಮತ್ತು ಗ್ರಂಥಾಲಯ ಹಾಗೂ ಕೋಲಾರದ ಬಿ.ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್‍ನ ಜಂಟಿ ಆಶ್ರಯದಲ್ಲಿ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದ ರಜತಸಂಭ್ರಮ ಸಭಾಂಗಣದಲ್ಲಿ 'ಕೋಲಾರ-ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ-2025ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಭವನದ ಸಂಸ್ಥಾಪಕ ಡಾ. ವಾಮನ ರಾವ್‍ಬೇಕಲ್-ಸಂಧ್ಯಾರಾಣಿ ಟೀಚರ್ ಸಮಾರಂಭ ಉದ್ಘಾಟಿಸಿದರು. ಕೋಲಾರ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ. ನಾರಾಯಣಪ್ಪ ಕನ್ನಡ ಧ್ವಜಾರೋಹಣ ಮತ್ತು ಕೋಲಾರದ ಬಿ. ವೆಂಕಟ್ರಾಮ ಕನ್ನಡ ಭುವನೇಶ್ವರೀ ಭಾವಚಿತ್ರಕ್ಕೆ ಹಾರಾರ್ಪಣೆ ನಡೆಸಿದರು. ಡಾ.ಕೆ.ಎನ್ ವೆಂಕಟ್ರಮಣ ಹೊಳ್ಳ ಅವರು ನವೀಕೃತ ವೇದಿಕೆ ಲೋಕಾರ್ಪಣೆಗೈದರು. ಕೋಲಾರದ ರಂಗ ಇಂಚರ ಟ್ರಸ್ಟ್ ಅಧ್ಯಕ್ಷ ಡಾ. ಇಂಚರ ನಾರಾಯಣ ಸ್ವಾಮಿ ಅವರು ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಸಾಹಿತಿ, ಪ್ರಾಧ್ಯಾಪಕ ಡಾ. ಶರಣಪ್ಪ ಗಬ್ಬೂರ್, ಕೊಡಗು ಕನ್ನಡಭವನ ಅಧ್ಯಕ್ಷ ಬೊಳ್ಳಜಿರ ಬಿ.ಅಪ್ಪಯ್ಯ, ರುಬೀನಾ ಎಂ.ಎ, ಸಾಮಾಜಿಕ ಮುಖಂಡರಾದ ಗೋಪಾಲ ಶೆಟ್ಟಿ ಅರಬೈಲು, ಶ್ರೀಧರ ಶೆಟ್ಟಿ ಮುಟ್ಟಂ, ಕಾಸರಗೋಡಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ದಾಸ ಸಂಕೀರ್ತನಕಾರ ಜಯಾನಂದ ಕುಮಾರ ಹೊಸದುರ್ಗ, ಪ್ರಾಂಶುಪಾಲ ಕೆ ಪಿ ರಾಜೇಶ್ಚಂದ್ರ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಾಹ ರಜತ ಸಂಭ್ರಮದಲ್ಲಿರುವ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ-ರೂಪಕಲಾ ದಂಪತಿಯನ್ನು ಗೌರವಿಸಲಾಯಿತು. ಈ ಸಂದರ್ಭ ಕನ್ನಡಭವನ ವತಿಯಿಂದ 25 ಮಂದಿ ಮುತೈದೆಯರಿಗೆ ಬಾಗಿನ ಸಮರ್ಪಣೆ ನಡೆಸಲಾಯಿತು. ಈ ಸಂದರ್ಭ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಚುಟುಕು ಕವಿಗೋಷ್ಠಿಯನ್ನು ಡಾ. ಶರಣಪ್ಪ ಗಬ್ಬೂರ್ ಉದ್ಘಾಟಿಸಿದರು.
ಈ ಸಂದರ್ಭ ಗುರುರಾಜ್ ಕಾಸರಗೋಡು ಸಾರಥ್ಯದ ಗಡಿನಾಡ ಸಾಂಸ್ಕøತಿಕ ಕಲಾ ವೇದಿಕೆಯ ಸುಮಾರು 50 ಮಂದಿ ಕಲಾವಿದರಿಂದ ಸಾಂಸ್ಕೃತಿಕ ವೈಭವ ಹಾಗೂ ಕೀಕಾನ ವಿಷ್ಣುಪ್ರಿಯಾ ಮಹಿಳಾ ಸಂಘದ ಸದಸ್ಯರಿಂದ ನೃತ್ಯ ಸಂಭ್ರಮ ನಡೆಯಿತು. ವಿವಿಧ ಸಾಧಕರಿಗೆ 2025ನೇ ಸಾಲಿನ ಸ್ವರ್ಣಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಭರವಸೆಯ ಬೆಳಕು ಪ್ರಶಸ್ತಿ, ಲೈಟ್ ಆಫ್ ಹೋಪ್ಸ್ ಅಚೀವ್‍ಮೆಂಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಶ್ರಿತ್ ರೈ ಮಧೂರು ಪ್ರಾರ್ಥನೆ ಹಾಡಿದರು. ಪ್ರದೀಪ್ ಬೇಕಲ್ ಸ್ವಾಘತಿಸಿದರು. ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





