HEALTH TIPS

ಭಾರತವು 2047ರ ವೇಳೆಗೆ 'ಸೂಪರ್‌ಪವರ್' ಆಗಲಿದೆ: ಇಸ್ರೊ ಮಾಜಿ ಅಧ್ಯಕ್ಷ

 ಡೆಹ್ರಾಡೂನ್‌: ಬಾಹ್ಯಾಕಾಶ ತಂತ್ರಜ್ಞಾನವನ್ನು ಜಗತ್ತಿಗೆ ಪೂರೈಸುವ ಮೂಲಕ ಭಾರತವು 2047ರ ವೇಳೆಗೆ 'ಸೂಪರ್‌ಪವರ್‌' ರಾಷ್ಟ್ರವಾಗಲಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) 71ನೇ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.


'ನಂಬಿಕೆ ಹಾಗೂ ವಾಸ್ತವಗಳು ಒಂದಕ್ಕೊಂದು ಪೂರಕವಾಗಿರುವಂತೆಯೇ, ವಿಜ್ಞಾನ ಮತ್ತು ಆಧ್ಯಾತ್ಮಿಕ ಆಲೋಚನೆಯೂ ಒಟ್ಟಿಗೆ ಇರಲು ಸಾಧ್ಯವಿದೆ' ಎಂದು ಪ್ರತಿಪಾದಿಸಿರುವ ಅವರು, 'ನಮ್ಮ ಋಷಿಮುನಿಗಳು, ಸಂತರು ಗಣಿತ, ಖಗೋಳಶಾಸ್ತ್ರ, ಲೋಹಶಾಸ್ತ್ರ, ವಾಸ್ತುಶಿಲ್ಪ ಮತ್ತು ವೈದ್ಯಕೀಯವನ್ನು ಅನ್ವೇಷಿಸಿದ್ದಾರೆ. ನಮ್ಮ ಆಧ್ಯಾತ್ಮಿಕತೆಯು ಆಧುನಿಕ ವಿಜ್ಞಾನದ ಒಳನೋಟಗಳನ್ನು ಸಾಕಾರಗೊಳಿಸಲಿದೆ' ಎಂದು ಹೇಳಿದ್ದಾರೆ.

'ಭಾರತವು ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದು ಪ್ರತಿಯೊಬ್ಬರಲ್ಲಿಯೂ ಹೊಸ ಆತ್ಮವಿಶ್ವಾಸವನ್ನು ತುಂಬುತ್ತಿದೆ' ಎಂದಿರುವ ಸೋಮನಾಥ್‌, 'ಜಗತ್ತು ಇದೇ ಮೊದಲ ಬಾರಿಗೆ ಭಾರತವನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಿದೆ. ಪ್ರಜಾಪ್ರಭುತ್ವದ ಸ್ಥಿರತೆಗೆ ನಾವೆಲ್ಲರೂ ಆಧಾರವಾಗಿರುವುದರಿಂದ ಇದು ಸಾಧ್ಯವಾಗಿದೆ' ಎಂದು ವಿಶ್ಲೇಷಿಸಿದ್ದಾರೆ.

'ಇಂದಿನ ಭಾರತವು ಯುವಕರಿಂದ ತುಂಬಿರುವ ಯುವ ಭಾರತವಾಗಿದೆ. ಶೇ 25ರಷ್ಟು ಜನರು ಯುವಕರೇ ಆಗಿದ್ದಾರೆ. ಮುಂದಿನ 25 ವರ್ಷಗಳವರೆಗೂ ಇದೇ ಸ್ಥಿತಿ ಮುಂದುವರಿಯಲಿದ್ದು, ನಮಗೆ ವರವಾಗಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತವು, 'ಚಂದ್ರಯಾನ-3' ಯೋಜನೆಯ ಮೂಲಕ ಚಂದ್ರನ ದಕ್ಷಿಣ ಭಾಗಕ್ಕೆ ತಲುಪಿದ ಮೊದಲ ರಾಷ್ಟ್ರವೆನಿಸಿದೆ ಎಂದು ಹರ್ಷಿಸಿರುವ ಅವರು, 'ಆದಿತ್ಯ ಎಲ್‌1' ಮೂಲಕ ಸೂರ್ಯನತ್ತಲೂ ಹೆಜ್ಜೆ ಇಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries