ತಿರುವನಂತಪುರಂ: ಸಪ್ಲೈಕೋ ಮಳಿಗೆಗಳಲ್ಲಿ ಪ್ರತಿ ಕಾರ್ಡ್‍ಗೆ ತಿಂಗಳಿಗೆ ಎರಡು ಲೀಟರ್ ತೆಂಗಿನ ಎಣ್ಣೆ ನೀಡಲಾಗುವುದು ಎಂದು ಆಹಾರ ಸಚಿವ ಜಿ.ಆರ್. ಅನಿಲ್ ಹೇಳಿದ್ದಾರೆ.
ಪ್ರಸ್ತುತ, ಪ್ರತಿ ಕಾರ್ಡ್‍ಗೆ ತಿಂಗಳಿಗೆ ಒಂದು ಲೀಟರ್ ತೆಂಗಿನ ಎಣ್ಣೆಯನ್ನು 319 ರೂ. ದರದಲ್ಲಿ ನೀಡಲಾಗುತ್ತಿದೆ. ಸಬ್ಸಿಡಿ ರಹಿತ ಶಬರಿ ತೆಂಗಿನ ಎಣ್ಣೆ 359 ರೂ. ಮತ್ತು ಕೇರಾ ತೆಂಗಿನ ಎಣ್ಣೆ 429 ರೂ. ದರದಲ್ಲಿ ಲಭ್ಯವಿರುತ್ತದೆ.
ಈ ತಿಂಗಳಿನಿಂದ 1,000 ರೂ.ಗಿಂತ ಹೆಚ್ಚಿನ ಸಬ್ಸಿಡಿ ರಹಿತ ಸರಕುಗಳನ್ನು ಖರೀದಿಸುವ ಎಲ್ಲರಿಗೂ ಒಂದು ಕಿಲೋ ಸಕ್ಕರೆಯನ್ನು 5 ರೂ.ಗೆ ನೀಡಲಾಗುತ್ತಿದೆ. 500 ರೂ.ಗಿಂತ ಹೆಚ್ಚಿನ ಸಬ್ಸಿಡಿ ರಹಿತ ಸರಕುಗಳನ್ನು ಖರೀದಿಸುವವರಿಗೆ 250 ಗ್ರಾಂ ಶಬರಿ ಗೋಲ್ಡ್ ಟೀ ಮೇಲೆ ಶೇಕಡಾ 25 ರಷ್ಟು ರಿಯಾಯಿತಿ ಲಭಿಸಲಿದೆ. 500 ರೂ.ಗಿಂತ ಹೆಚ್ಚಿನ ಬಿಲ್‍ಗಳಿಗೆ, ಸಪ್ಲೈಕೋ ಮಳಿಗೆಗಳಲ್ಲಿ ಯುಪಿಐ ಮೂಲಕ ಪಾವತಿ ಮಾಡಿದರೆ 5 ರೂ. ರಿಯಾಯಿತಿ ನೀಡಲಾಗುವುದು.
ಈ ವರ್ಷವೂ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಳಂ, ಕೊಟ್ಟಾಯಂ ಮತ್ತು ತ್ರಿಶೂರ್‍ನಲ್ಲಿ ವಿಶೇಷ ಕ್ರಿಸ್‍ಮಸ್ ಮೇಳಗಳನ್ನು ಆಯೋಜಿಸಲಾಗುವುದು. ಡಿಸೆಂಬರ್ 21 ರಿಂದ ಜನವರಿ 1 ರವರೆಗೆ ಈ ಮೇಳಗಳು ನಡೆಯಲಿವೆ. ತಾಲ್ಲೂಕು ಮಟ್ಟದಲ್ಲಿ ಆಯ್ದ ಸೂಪರ್ ಮಾರ್ಕೆಟ್‍ಗಳು ಕ್ರಿಸ್‍ಮಸ್ ಮೇಳಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಚಿವರು ಮಾಹಿತಿ ನೀಡಿದರು.




