ತಿರುವನಂತಪುರಂ: ಸ್ಥಳೀಯಾಡಳಿತ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 21.ಎಂದರೆ ಇನ್ನು ಕೇವಲ ಹತ್ತೇ ಹತ್ತು ದಿನಗಳು. ನವೆಂಬರ್ 22 ರಂದು ಪರಿಶೀಲನೆ ನಡೆಯಲಿದೆ. ನವೆಂಬರ್ 24 ರವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು. ಡಿಸೆಂಬರ್ 21 ರ ಮೊದಲು ಸ್ಥಳೀಯಾಡಳಿತ ಸಂಸ್ಥೆಗಳ ಸಮಿತಿಗಳು ಅಧಿಕಾರ ವಹಿಸಿಕೊಳ್ಳಬೇಕು.
ಚುನಾವಣೆಯನ್ನು ಸುಗಮವಾಗಿ ನಡೆಸಲು ಸುಮಾರು 2.5 ಲಕ್ಷ ನೌಕರರನ್ನು ನೇಮಿಸಲಾಗಿದೆ.
ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಪ್ರಸ್ತುತ 1199 ಸ್ಥಳೀಯ ಸಂಸ್ಥೆಗಳಲ್ಲಿ 23576 ವಾರ್ಡ್‍ಗಳಿವೆ. ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ.
2,8430761 ಮತದಾರರಲ್ಲಿ 1.5 ಕೋಟಿಗೂ ಹೆಚ್ಚು ಮಹಿಳೆಯರು. 2841 ಅನಿವಾಸಿ ಮತದಾರರೂ ಇದ್ದಾರೆ.




