ಕೊಚ್ಚಿ: ಸಂಶೋಧನಾ ವಿದ್ಯಾರ್ಥಿನಿಯೊಬ್ಬಳ ಮೇಲೆ ಜಾತಿ ಆಧಾರದ ಮೇಲೆ ದೌರ್ಜನ್ಯ ಎಸಗಿದ ದೂರಿನ ಮೇರೆಗೆ ಕೇರಳ ವಿಶ್ವವಿದ್ಯಾಲಯದ ಸಂಸ್ಕøತ ವಿಭಾಗದ ಮುಖ್ಯಸ್ಥೆ ಡಾ. ಸಿ ಎನ್ ವಿಜಯಕುಮಾರಿ ಅವರ ಬಂಧನಕ್ಕೆ ಹೈಕೋರ್ಟ್ ತಡೆ ನೀಡಿದೆ.
ವಿಜಯಕುಮಾರಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ನಂತರ ಹೈಕೋರ್ಟ್ ಪೋಲೀಸರಿಂದ ವಿವರಣೆ ಕೇಳಿದೆ.
ಕೇರಳ ವಿಶ್ವವಿದ್ಯಾಲಯದ ಕಾರ್ಯವಟ್ಟಂ ಕ್ಯಾಂಪಸ್‍ನಲ್ಲಿ ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿ ವಿಪಿನ್ ವಿಜಯನ್ ಅವರ ದೂರಿನ ಮೇರೆಗೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವಿಭಾಗದ ಮುಖ್ಯಸ್ಥೆ ವಿಜಯಕುಮಾರಿ ಜಾತಿ ನಿಂದನೆ ಮಾಡಿದ್ದಾರೆ ಮತ್ತು ತನಗೆ ಪಿಎಚ್‍ಡಿ ನೀಡಬಾರದು ಎಂದು ಒತ್ತಾಯಿಸಿ ಉಪಕುಲಪತಿಗೆ ಪತ್ರ ಬರೆದಿದ್ದಾರೆ ಎಂದು ವಿಪಿನ್ ಆರೋಪಿಸಿದ್ದರು.




