ಆಗಂ: ಇಂಡೊನೇಷ್ಯಾದಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಮೃತಪಟ್ಟವರ ಸಂಖ್ಯೆ 248ಕ್ಕೆ ಏರಿಕೆಯಾಗಿದೆ. ಶನಿವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ರಸ್ತೆ ಮತ್ತು ಸೇತುವೆಗಳು ಕುಸಿದಿರುವುದರಿಂದ ಸಂತ್ರಸ್ತರನ್ನು ತಲುಪುವುದು ಕಷ್ಟವಾಗಿದೆ.
ಹೆಲಿಕಾಪ್ಟರ್ ಮೂಲಕ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಸುಮಾತ್ರಾದ ಪ್ರಾಂತ್ಯದ ತಪನುಲಿ ಜಿಲ್ಲೆಯು ಹೆಚ್ಚು ಹಾನಿಗೊಳಗಾಗಿದೆ ಎಂದು ಹೇಳಿದರು.
ಸುಮಾತ್ರಾ ದ್ವೀಪದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಸಂಭವಿಸಿತು.




