ತಿರುವನಂತಪುರಂ: ಸ್ಥಳೀಯಯಾಡಳಿತ ಸಂಸ್ಥೆಗಳ ಚುನಾವಣೆಗೆ ಮುನ್ನ ಪೂರಕ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2,67,587 ಮತಗಳನ್ನು ಸೇರಿಸಲಾಗಿದೆ.
ರಾಜ್ಯದಲ್ಲಿ ಈಗ ಒಟ್ಟು ಮತದಾರರ ಸಂಖ್ಯೆ 2,86,6271. ಅಲ್ಲದೆ 34,745 ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಟ್ಟಿಯನ್ನು ನಿನ್ನೆ ಮಧ್ಯರಾತ್ರಿ ಪ್ರಕಟಿಸಲಾಗಿದೆ. ಕಳೆದ ಶುಕ್ರವಾರ ಪಟ್ಟಿಯನ್ನು ಪ್ರಕಟಿಸಬೇಕಿತ್ತು.ಈ ಮಧ್ಯೆ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ನವೆಂಬರ್ 21 ರಂದು ನಾಮಪತ್ರ ಸಲ್ಲಿಸುವ ಗಡುವು ಕೊನೆಗೊಳ್ಳಲಿದೆ. ರಾಜ್ಯ ಚುನಾವಣಾ ಆಯೋಗವು ಚುನಾವಣೆಯಲ್ಲಿ ಅನುಸರಿಸಬೇಕಾದ ಮಾದರಿ ನೀತಿ ಸಂಹಿತೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಡಿಸೆಂಬರ್ 9 ಮತ್ತು 11 ರಂದು ಮತದಾನ ನಡೆಯಲಿದೆ. ಕಾಸರಗೋಡು ಜಿಲ್ಲೆಯಲ್ಲಿ 11 ರಂದುಮತ್ಅನ ನಿಗದಿಯಾಗದೆ. ಡಿಸೆಂಬರ್ 13 ರಂದು ಮತ ಎಣಿಕೆ ನಡೆಯಲಿದೆ.




