HEALTH TIPS

ಬೆಟ್ಟಿಂಗ್‌: ಬೈಕ್‌ ಚಾಲಕನ ಖಾತೆಯಲ್ಲಿ ₹331 ಕೋಟಿ ಪತ್ತೆ!

 ನವದೆಹಲಿ: ಕಾನೂನುಬಾಹಿರ ಬೆಟ್ಟಿಂಗ್‌ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೈಕ್‌ ಟ್ಯಾಕ್ಸಿ ಚಾಲಕನ ಬ್ಯಾಂಕ್ ಖಾತೆಗೆ ₹331 ಕೋಟಿಗೂ ಹೆಚ್ಚು ಹಣ ಜಮೆಯಾಗಿರುವುದನ್ನು ಪತ್ತೆ ಮಾಡಿದ್ದಾರೆ. 


'1ಎಕ್ಸ್‌ಬೆಟ್‌ ಆನ್‌ಲೈನ್‌ ಬೆಟ್ಟಿಂಗ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವಾಗ ರ‍್ಯಾಪಿಡೊ ಬೈಕ್‌ ಚಾಲಕನ ಬ್ಯಾಂಕ್‌ ಖಾತೆಗೆ 2024ರಿಂದ ಆಗಸ್ಟ್ 19ರಿಂದ 2025ರ ಏಪ್ರಿಲ್‌ 16ರ ನಡುವೆ ₹331.36 ಕೋಟಿಗೂ ಹೆಚ್ಚು ಠೇವಣಿ ಜಮೆಯಾಗಿರುವುದು ಕಂಡುಬಂದಿದೆ. ಇವರು ದೆಹಲಿಯ ಸಾಧಾರಣ ಪ್ರದೇಶದಲ್ಲಿ ಎರಡು ಕೊಠಡಿಗಳ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಜೀವನೋಪಾಯಕ್ಕಾಗಿ ಬೈಕ್‌ ಓಡಿಸುತ್ತಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಅಕ್ರಮವಾಗಿ ಗಳಿಸಿದ ಹಣವನ್ನು ಠೇವಣಿ ರೂಪದಲ್ಲಿರಿಸಲು ನಕಲಿ ಖಾತೆಗಳನ್ನು ಬಳಸುತ್ತಿರುವುದಕ್ಕೆ ಇದು ದೊಡ್ಡ ಉದಾಹರಣೆಯಾಗಿದೆ' ಎಂದು ಹೇಳಿದ್ದಾರೆ.

'ರಾಜಸ್ಥಾನದ ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಮದುವೆಯ ವೆಚ್ಚ ಭರಿಸಲು ₹331 ಕೋಟಿ ಪೈಕಿ ₹1 ಕೋಟಿಗೂ ಹೆಚ್ಚಿನ ಮೊತ್ತವನ್ನು ಬಳಸಲಾಗಿದೆ. ಈ ವಿವಾಹವು ಗುಜರಾತ್‌ನ ಯುವ ರಾಜಕಾರಣಿಗೆ ಸಂಬಂಧಿಸಿದೆ' ಎಂದು ತಿಳಿಸಿದ್ದಾರೆ.

'ಬ್ಯಾಂಕ್ ವಹಿವಾಟುಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಉದಯಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ನನ್ನ ಖಾತೆ ಮೂಲಕ ಹಣ ಪಡೆದ ವಧು- ವರ ಅಥವಾ ಅವರ ಕುಟುಂಬಗಳ ಬಗ್ಗೆ ಮಾಹಿತಿ ಇಲ್ಲ ಎಂದು ಚಾಲಕ ವಿಚಾರಣೆ ವೇಳೆ ತಿಳಿಸಿದ್ದಾರೆ' ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries