HEALTH TIPS

ಬಾಲನ್ಯಾಯ ಮಂಡಳಿ | ನ್ಯಾಯದಾನಕ್ಕಾಗಿ ಕಾಯುತ್ತಿರುವ 50 ಸಾವಿರಕ್ಕೂ ಅಧಿಕ ಮಕ್ಕಳು!

ನವದೆಹಲಿ: ನಿಧಾನಗತಿಯ ನ್ಯಾಯಾಂಗ ವ್ಯವಸ್ಥೆಯಿಂದಾಗಿ, 362 ಬಾಲ ನ್ಯಾಯ ಮಂಡಳಿ (ಜೆಜೆಬಿ)ಗಳಲ್ಲಿ ಬಾಲಾಪರಾಧಕ್ಕೆ ಸಂಬಂಧಿಸಿದ 50 ಸಾವಿರಕ್ಕೂ ಅಧಿಕ ಮಕ್ಕಳ ಪ್ರಕರಣಗಳು ವಿಚಾರಣೆಗೆ ಬಾಕಿಯಿರುವುದಾಗಿ 'ನ್ಯೂ ಇಂಡಿಯಾ ಜಸ್ಟೀಸ್ ರಿಪೋರ್ಟ್ ' (ಐಜೆಆರ್) ಸಂಸ್ಥೆಯು ಪ್ರಕಟಿಸಿದ ಅಧ್ಯಯನ ವರದಿಯೊಂದು ತಿಳಿಸಿದೆ.

ಬಾಲನ್ಯಾಯ ಕಾಯ್ದೆ ಜಾರಿಗೆ ಬಂದು ಹತ್ತು ವರ್ಷಗಳಾದರೂ, ನ್ಯಾಯಾಧೀಶರ ಕೊರತೆ, ಬಾಲಸುಧಾರಣಾ ಗೃಹಗಳ ಪರಿಶೀಲನೆ ನಡೆಸದಿರುವುದು, ದತ್ತಾಂಶಗಳ ಅಲಭ್ಯತೆ, ರಾಜ್ಯಮಟ್ಟದ ಅಸಮಾನತೆಗಳಿಂದಾಗಿ ನ್ಯಾಯದಾನದ ಮೇಲೆ ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

2023ರ ಆಕ್ಟೋಬರ್ 31ರವರೆಗೆ, ಬಾಲನ್ಯಾಯ ಮಂಡಳಿಗಳ ಮುಂದಿರುವ 1,00,904 ಪ್ರಕರಣಗಳ ಪೈಕಿ ಶೇ. 55ರಷ್ಟು ವಿಚಾರಣೆಗೆ ಬಾಕಿಯುಳಿದಿವೆ. ಒಡಿಶಾದಲ್ಲಿ ಶೇ.83 ಹಾಗೂ ಕರ್ನಾಟಕದಲ್ಲಿ ಶೇ.35ರಷ್ಟು ಪ್ರಕರಣಗಳು ವಿಚಾರಣೆಗೆ ಬಾಕಿಯಿದೆ ಎಂದು ವರದಿ ತಿಳಿಸಿದೆ.

ಭಾರತದ 765 ಜಿಲ್ಲೆಗಳ ಪೈಕಿ ಶೇ.92ರಲ್ಲಿ ಬಾಲನ್ಯಾಯಮಂಡಳಿಗಳು ರಚನೆಯಾಗಿದ್ದರೂ, ಪ್ರತಿ ನಾಲ್ಕು ಮಂಡಳಿಗಳ ಪೈಕಿ ಒಂದು ಪೂರ್ಣ ಪೀಠವನ್ನು ಹೊಂದಿಲ್ಲವೆಂದು ವರದಿ ತಿಳಿಸಿದೆ.

2023ರಲ್ಲಿ ಭಾರತೀಯ ದಂಡಸಂಹಿತೆ ಹಾಗೂ ವಿಶೇಷ ಕಾನೂನುಗಳಡಿ 31,365 ಪ್ರಕರಣಗಳಲ್ಲಿ 40,036 ಬಾಲಾರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ನಾಲ್ಕನೇ ಮೂರನೇ ರಷ್ಟು ಮಂದಿ 16 ಹಾಗೂ 18 ವರ್ಷದೊಳಗಿನವರು ಎಂದು ಭಾರತದಲ್ಲಿ ಅಪರಾಧ ಕುರಿತ ದತ್ತಾಂಶವು ತಿಳಿಸಿದೆ.

ಶೇ.30ರಷ್ಟು ಜೆಜೆಬಿಗಳು, ಕಾನೂನುಸೇವಾ ಘಟಕವನ್ನು ಹೊಂದದೆ ಇರುವ ಬಗ್ಗೆಯೂ ವರದಿಯಲ್ಲಿ ಗಮನಸೆಳೆಯಲಾಗಿದೆ. 14 ರಾಜ್ಯಗಳು ಹಾಗೂ ಜಮ್ಮುಕಾಶ್ಮೀರದಲ್ಲಿನ ಬಾಲಸುಧಾರಣಾ ಗೃಹಗಳು ಸುರಕ್ಷತೆಯ ಕೊರತೆಯನ್ನು ಎದುರಿಸುತ್ತಿದೆ. ಹೆಣ್ಣು ಮಕ್ಕಳಿಗಾಗಿ ಕೇವಲ 40, ಪಾಲನಾ ಗೃಹಗಳಿವೆಯೆಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries