ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ 60 ಬಾರಿ ಆಪರೇಶನ್ ಸಿಂಧೂರ್ ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಆದರೆ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ಹೇಳಿದರು.
ಯುಎಸ್-ಚೈನಾ ಎಕನಾಮಿಕ್ ಆಂಡ್ ಸೆಕ್ಯೂರಿಟಿ ರಿವ್ಯೂ ಕಮಿಷನ್ ತನ್ನ ವಾರ್ಷಿಕ ವರದಿಯನ್ನು ಅಮೆರಿಕ ಸಂಸತ್ತಿಗೆ ಸಲ್ಲಿಸಿದೆ. 2025ರ ವಾರ್ಷಿಕ ವರದಿಯು ಸುಮಾರು 800 ಪುಟಗಳಷ್ಟಿದೆ. ಇದರ 108 ಮತ್ತು 109ನೇ ಪುಟಗಳಲ್ಲಿ ಆಶ್ಚರ್ಯಕರ ಅಂಶಗಳಿವೆ. ಅದನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟ. ಇದರಲ್ಲಿ ಪಾಕಿಸ್ತಾನದಿಂದ ಪ್ರೇರಿತ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು 'ಬಂಡಾಯಗಾರರ ದಾಳಿ' ಎಂದು ಹೇಳಲಾಗಿದೆ. ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಮಿಲಿಟರಿ ಯಶಸ್ಸು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಆಕ್ಷೇಪಣೆಗಳನ್ನು ಸಲ್ಲಿಸುತ್ತಾ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.




