HEALTH TIPS

ಹಾಂಗ್‌ಕಾಂಗ್ | ಬೆಂಕಿ ಅವಘಡ: ಮೃತರ ಸಂಖ್ಯೆ 55ಕ್ಕೇರಿಕೆ, ಮೂವರು ಶಂಕಿತರ ಬಂಧನ

ಹಾಂಗ್‌ಕಾಂಗ್‌: ನಗರದ ವಸತಿ ಸಮುಚ್ಚಯವೊಂದರ ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

'ಈ ಘಟನೆಯಲ್ಲಿ 300 ಮಂದಿ ನಾಪತ್ತೆಯಾಗಿದ್ದಾರೆ. ಕಟ್ಟಡಗಳಲ್ಲಿದ್ದ 500ಕ್ಕೂ ಅಧಿಕ ಜನರನ್ನು ತಾತ್ಕಾಲಿಕ ಆಶ್ರಯತಾಣಗಳಿಗೆ ಸ್ಥಳಾಂತರಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

ನಿರ್ಮಾಣ ಕಾಮಗಾರಿಗಾಗಿ ಕಟ್ಟಡಗಳ ಸುತ್ತಲೂ ಬಿದಿರಿನ ಕಂಬಗಳನ್ನು ಅಳವಡಿಸಿದ್ದರಿಂದ ಬೆಂಕಿಯು ಮತ್ತಷ್ಟು ತೀವ್ರವಾಗಿ ವ್ಯಾಪಿಸಿತ್ತು. ದಟ್ಟ ಹೊಗೆ ಮತ್ತು ಜ್ವಾಲೆ ಕಟ್ಟಡಗಳನ್ನು ಆವರಿಸಿಕೊಂಡಿತ್ತು.

'ಘಟನೆ ನಡೆದ ಪ್ರದೇಶದಲ್ಲಿ ಎಂಟು ಬ್ಲಾಕ್‌ಗಳಿದ್ದು, 2,000 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಇವುಗಳಲ್ಲಿ 4,600ಕ್ಕೂ ಹೆಚ್ಚು ಜನರನ್ನು ವಾಸಿಸುತ್ತಿದ್ದರು. ಗುರುವಾರ ಬೆಳಿಗ್ಗೆಯ ಹೊತ್ತಿಗೆ ನಾಲ್ಕು ಬ್ಲಾಕ್‌ಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಜತೆಗೆ, ಮೂರು ಬ್ಲಾಕ್‌ಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries