HEALTH TIPS

ಜಿಲ್ಲೆಯಲ್ಲಿ ಮೊದಲ ಹಂತದ ರ್ಯಾಂಡಮೈಸೇಶನ್ ಪೂರ್ಣ- ಮತದಾನ ಕರ್ತವ್ಯಗಳಿಗೆ 7688 ಮತದಾನ ಸಿಬ್ಬಂದಿ ಆಯ್ಕೆ

ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತದಾನದ ಕೆಲಸಕ್ಕೆ ಅಧಿಕಾರಿಗಳ ಮೊದಲ ಹಂತದ ರ್ಯಾಂಡಮೈಸೇಶನ್  ಪೂರ್ಣಗೊಂಡಿದೆ. ಜಿಲ್ಲಾ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ ಇಂಭಶೇಖರ್ ಅವರು ಆನ್‍ಲೈನ್  ರ್ಯಾಂಡಮೈಸೇಶನ್  ಮೂಲಕ 7688 ಅಧಿಕಾರಿಗಳನ್ನು ಆಯ್ಕೆ ಮಾಡಿದರು.

ಇವರಲ್ಲಿ ಪ್ರಿಸೈಡಿಂಗ್ ಆಫೀಸರ್‍ಗಳಾಗಿ 1922 (925 ಪುರುಷರು, 997 ಮಹಿಳೆಯರು) ಮತ್ತು ಫಸ್ಟ್ ಪೆÇೀಲಿಂಗ್ ಆಫೀಸರ್‍ಗಳಾಗಿ 1922 (686 ಪುರುಷರು, 1236 ಮಹಿಳೆಯರು) ಮತ್ತು ಪೆÇೀಲಿಂಗ್ ಆಫೀಸರ್‍ಗಳಾಗಿ 3844 (1325 ಪುರುಷರು, 2519 ಮಹಿಳೆಯರು) ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ 4,752 ಜನರು ಮಹಿಳೆಯರು ಮತ್ತು 2,936 ಜನರು ಪುರುಷರು.

ಅಗತ್ಯಕ್ಕಿಂತ ಶೇ.40ರಷ್ಟು ಹೆಚ್ಚು ಮಂದಿ ಸಇಬ್ಬಂದಿಯನ್ನು ಮೊದಲ ಹಂತದ ಪಟ್ಟಿಯಲ್ಲಿ ಒಳಪಡಿಸಲಾಗಿದೆ. ಎರಡನೇ ಹಂತದಲ್ಲಿ, ಇವರಲ್ಲಿ ಶೇ.20 ಸಿಬ್ಬಂದಿಯನ್ನು ಕೈಬಿಡಲಾಗುವುದು. ಇ-ಡ್ರಾಪ್ ಸಾಫ್ಟ್ ವೇರ್  ಮೂಲಕ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಮೊದಲ ಹಂತದಲ್ಲಿ ಆಯ್ಕೆಯಾದ ಪ್ರಿಸೈಡಿಂಗ್ ಅಧಿಕಾರಿಗಳು ಹಾಗೂ ಫಸ್ಟ್ ಪೆÇೀಲಿಂಗ್ ಅಧಿಕಾರಿಗಳಿಗೆ ನವೆಂಬರ್ 25ರಿಂದ 28ರ ವರೆಗೆ ಬ್ಲಾಕ್ ಪಂಚಾಯಿತಿ ಹಾಗೂ ನಗರಸಭೆ ಮಟ್ಟದಲ್ಲಿ ತರಬೇತಿ ನೀಡಲಾಗುವುದು.

ರಾಜ್ಯ ಚುನಾವಣಾ ಆಯೋಗದ hಣಣಠಿs://ತಿತಿತಿ.eಜಡಿoಠಿ.seಛಿ.ಞeಡಿಚಿಟಚಿ.gov.iಟಿ ಎಂಬ ವೆಬ್‍ಸೈಟ್‍ನಿಂದ ಉದ್ಯೋಗಕ್ಕಾಗಿ ನೇಮಕಾತಿ ಆದೇಶವನ್ನು ಡೌನ್‍ಲೋಡ್ ಮಾಡಿ ಸಿಬ್ಬಂದಿಗೆ ಹಸ್ತಾಂತರಿಸುವಂತೆ ಕಚೇರಿ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಈಗಾಗಲೇ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೊದಲ ಹಂತದ ರ್ಯಾಂಡಮೈಸೇಶನ್‍ನಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಿ ಅಖಿಲ್, ಜಿಲ್ಲಾ ಮಾಹಿತಿ ಅಧಿಕಾರಿ ಪಿ ಪವನನ್ ಉಪಸ್ಥಿತರಿದ್ದರು


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries