ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಅಂಗವಾಗಿ, ಜಿಲ್ಲೆಯ ವಿವಿಧ ಸ್ಥಳೀಯ ಸರ್ಕಾರಿ ಸಂಸ್ಥೆಗಳ ವಾರ್ಡ್‍ಗಳು ಮತ್ತು ವಿಭಾಗಗಳಿಗೆ ಇದುವರೆಗೆ 830 ನಾಮಪತ್ರಗಳನ್ನು ಸಲ್ಲಿಕೆಯಾಘಿದೆ.
ಕಾಸರಗೋಡು ಜಿಲ್ಲಾ ಪಂಚಾಯಿತಿಯ ವಿವಿಧ ವಿಭಾಗಗಳಿಗೆ ಐದು ಹೊಸ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇದುವರೆಗೆ 37ನಾಮಪತ್ರಗಳು ಸಲ್ಲಿಕೆಯಾಗಿದೆ. ನೀಲೇಶ್ವರಂ ಬ್ಲಾಕ್ ಪಂಚಾಯತ್‍ನಲ್ಲಿ 62 ನಾಮಪತ್ರಗಳು, ಪರಪ್ಪ ಬ್ಲಾಕ್ ಪಂಚಾಯತ್‍ನಲ್ಲಿ 32, ಕಾಞಂಗಾಡ್ ಬ್ಲಾಕ್ ಪಂಚಾಯತ್‍ನಲ್ಲಿ 30 ನಾಮಪತ್ರ ಮತ್ತು ಮಂಜೇಶ್ವರಂ ಬ್ಲಾಕ್ ಪಂಚಾಯಿತಿಯಲ್ಲಿ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾರಡ್ಕ ಬ್ಲಾಕ್ ಪಂಚಾಯಿತಿಯಲ್ಲಿ 19ನಾಮಪತ್ರ ಸಲ್ಲಿಕೆಯಾಗಿದ್ದು, ಕಾಸರಗೋಡು ಬ್ಲಾಕ್ ಪಂಚಾಯಿತಿಯಲ್ಲಿ 16, ಕಾಞಂಗಾಡ್ ನಗರಸಭೆಯಲ್ಲಿ 74, ನೀಲೇಶ್ವರಂ ನಗರಸಭೆಯಲ್ಲಿ 56, ಕಾಸರಗೋಡು ನಗರಸಭೆಯಲ್ಲಿ 21 ನಾಮಪತ್ರಗಳು ಸಲ್ಲಿಕೆಯಾಗಿದೆ.
ನವೆಂಬರ್ 21 ರವರೆಗೆ ನಾಮಪತ್ರಗಳನ್ನು ಸಲ್ಲಿಕೆಗೆ ವಕಾಶವಿದ್ದು, 22 ರಂದು ಸೂಕ್ಷ್ಮ ಪರಿಶೀಲನೆ ಹಾಗೂ ನವೆಂಬರ್ 24 ರವರೆಗೆ ನಾಮಪತ್ರಗಳನ್ನು ಹಿಂಪಡೆಯಬಹುದು.




