ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷಾ ವರದಿಗಳು ಬುಧವಾರವೂ ಹೊರಬರುತ್ತಿವೆ. ಆಯಕ್ಸಿಸ್ ಮೈ ಇಂಡಿಯಾ, ಟುಡೇಸ್ ಚಾಣಕ್ಯ ಮತ್ತು ಕಾಮಾಕ್ಯ ಅನಾಲಿಟಿಕ್ಸ್ ಸಂಸ್ಥೆಗಳು ತಮ್ಮ ವರದಿಗಳನ್ನು ಬಿಡುಗಡೆ ಮಾಡಿವೆ. ಈ ಸಮೀಕ್ಷೆಗಳ ಪ್ರಕಾರ ಎನ್‌ಡಿಎ ಮೈತ್ರಿಕೂಟವು ಭಾರಿ ಬಹುಮತ ಪಡೆದುಕೊಳ್ಳಲಿದೆ.
ಆದರೆ, 'ಆರ್‌ಜೆಡಿ ಪಕ್ಷವು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ (67-76). ಎನ್‌ಡಿಎ ಪಾಳಯವು ಬಹುಮತ ಪಡೆದುಕೊಳ್ಳಲಿದೆಯಾದರೂ ಬಿಜೆಪಿಯು ಕಳೆದ ಬಾರಿಗಿಂತ 18-23 ಸ್ಥಾನ ಕಳೆದುಕೊಳ್ಳಲಿದೆ. ಈ ಮೈತ್ರಿಕೂಟದಲ್ಲಿ ಜೆಡಿಯು ಪಕ್ಷವೇ ಅತಿ ದೊಡ್ಡ ಪಕ್ಷವಾಗಲಿದೆ' ಎಂದು ಆಯಕ್ಸಿಸ್ ಮೈ ಇಂಡಿಯಾ ಹೇಳಿದೆ.
ಜೊತೆಗೆ, ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಶೇ 34ರಷ್ಟು ಜನರು ಒಲವು ಹೊಂದಿದ್ದಾರೆ. ನಿತಿಶ್ ಕುಮಾರ್ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಶೇ 22ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ಈ ಸಂಸ್ಥೆ ಹೇಳಿದೆ.
ಸಂಸ್ಥೆ; ಎನ್‌ಡಿಎ; 'ಇಂಡಿಯಾ'; ಜನ ಸುರಾಜ್; ಇತರರು
ಆಯಕ್ಸಿಸ್ ಮೈ ಇಂಡಿಯಾ; 121-141; 98-118; 0-2; 0
ಟುಡೇಸ್ ಚಾಣಕ್ಯ; 148-172; 65-89; 0; 3-9
ಕಾಮಾಕ್ಯ ಅನಾಲಿಟಿಕ್ಸ್; 167-187; 54-74; 0-2; 2-7




