ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ)ಕಾಸರಗೋಡು ವಲಯ ಸಮ್ಮೇಳನದ ಅಂಗವಾಗಿ ವೆಸ್ಟ್ ಯೂನಿಟ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಯಿತು. ವಲಯ ಸಮಿತಿ ಅಧ್ಯಕ್ಷ ಸನ್ನಿ ಜೇಕಬ್ ವೈದ್ಯಕೀಯ ಶಿಬಿರ ಉದ್ಘಾಟಿಸಿದರು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ನೇತೃತ್ವ ವಹಿಸಿದ್ದರ. ಎಕೆಪಿಎ ಸಮ್ಮೇಳನವನ್ನು ಅಬಕರಿ ಸಹಾಯಕ ಆಯುಕ್ತ ಅನ್ವರ್ ಸಾದತ್ ಉದ್ಘಾಟಿಸಿದರು.
ಜಿಲ್ಲಾ ಸ್ಪೋಟ್ರ್ಸ್ ಕೋರ್ಡಿನೇಟರ್ ರತೀಶ್ ರಾಮು, ಸಬ್ ಕೋರ್ಡಿನೇಟರ್ ಸುರೇಶ್ ಬಿ.ಜೆ, ಕಾಸರಗೋಡು ವಲಯ ಕಾರ್ಯದರ್ಶಿ ವಾಮನ್ ಕುಮಾರ್, ಕೋಶಾಧಿಕಾರಿ ಮನು ಎಲ್ಲೋರ, ಯೂನಿಟ್ ಕಾರ್ಯದರ್ಶಿ ಶಾಲಿನಿರಾಜೇಂದ್ರನ್, ಪಿ.ಆರ್.ಓ ವಿನೋದ್ ಕಲ್ಲಂಗೈ ಸದ್ಯಸರಾದ ಮೈಂದಪ್ಪ ಕೆ.ಎಂ, ಗಣೇಶ್ ರೈ ವಾಸು ಎ, ಈಸ್ಟ್, ವಿದ್ಯಾನಗರ, ಮುಳ್ಳೇರಿಯಾ ಯೂನಿಟ್ ಅಧ್ಯಕ್ಷರುಗಳಾದ ಸುಜಿತ್ ನಾರಾಯಣನ್, ಪ್ರಶೋಬ್, ಹರೀಶ್ ಅಡೂರು, ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶಿಬಿರವನ್ನು ಉಪ್ಪಳದ ಹೆಲ್ತ್ ಮೆಡಿಕಲ್ ಸೆಂಟರ್ ನ ಶೋಭಾ ವಿಶ್ವನಾಥ ಆಚಾರ್ಯ ಮತ್ತು ಸಹೋದ್ಯೋಗಿಗಳಾದ ನಿತಿನ್ ಹಾಗೂ ನಿಶಿತ ಇವರು ನಡೆಸಿಕೊಟ್ಟರು.





