ಕಾಸರಗೋಡು: ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ, ಮಾದಕ ದ್ರವ್ಯಗಳ ವಿರುದ್ಧ ಓಟ(ರನ್ ಅಗೈನ್ಸ್ಟ್ ಡ್ರಗ್)ಕಾರ್ಯಕ್ರಮವನ್ನು ಕಾಸರಗೋಡಿನಲ್ಲಿ ಆಯೋಜಿಸಲಾಯಿತು. ತಳಂಗೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯ್‍ಭರತ್ ರೆಡ್ಡಿ ಕಾರ್ಯಕ್ರಮಕ್ಕೆ ಧ್ವಜ ಬೀಸಿ ಚಾಲನೆ ನೀಡಿದರು.
ತಳಂಗರೆಯಿಂದ ರೈಲ್ವೆ ನಿಲ್ದಾಣ ರಸ್ತೆ ಮೂಲಕ ಸಾಗಿ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಸಂಪನ್ನಗೊಂಡಿತು. ಅಪರಾಧ ವಿಭಾಗದ ಎಸ್ಪಿ ಬಾಲಕೃಷ್ಣನ್ ನಾಯರ್, ಎಎಸ್ಪಿ ಡಾ. ನಂದಗೋಪನ್, ಹೆಚ್ಚುವರಿ ಎಸ್ಪಿ ದೇವದಾಸ್, ಡಿಸಿಆರ್‍ಬಿ ಡಿವೈಎಸ್ಪಿ ಮಣಿಕಂಠನ್, ಕಾಸರಗೋಡು ನಗರಠಾಣೆ ಪೆÇಲೀಸ್, ಕಾಸರಗೋಡು ಸರ್ಕಾರಿ ಕಾಲೇಜು ಎನ್.ಎಸ್.ಎಸ್ ವಿದ್ಯಾರ್ಥಿಗಳು, ವ್ಯಾಪಾರಿ ಸಂಘ ಸದಸ್ಯರು, ಕೈಗಾರಿಕೋದ್ಯಮಿಗಳ ಸಮಿತಿ, ರೋಟರಿ ಕ್ಲಬ್ ಕಾಸರಗೋಡು, ಲಯನ್ಸ್ ಕ್ಲಬ್ ಕಾಸರಗೋಡು, ವಾಮೋಸ್ ತಳಂಗರೆ, ವಿದ್ಯಾರ್ಥಿ ಪೆÇಲೀಸ್, ಸರ್ಕಾರಿ ಆಸ್ಪತ್ರೆ, ಜೆಪಿಎಚ್‍ಎನ್ ತರಬೇತಿ ಕೇಂದ್ರ ವಿದ್ಯಾರ್ಥಿಗಳು, ಕ್ರೀಡಾ ಮಂಡಳಿ, ಮಲಿಕ್ ದಿನಾರ್ ನಸಿರ್ಂಗ್ ಶಾಲೆ ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.




