HEALTH TIPS

ಕೈ ಕೊಟ್ಟ ಲವರ್: ಎ.ಐ ಜೊತೆ ಗಾಂಧರ್ವ ವಿವಾಹವಾದ ಜಪಾನ್ ಯುವತಿ!

ಹೂಸ್ಟನ್: ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ಚಾಟ್‌ ಜಿಪಿಟಿ ಬಳಸಿ ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಸಂಗಾತಿಯನ್ನು ಮದುವೆಯಾಗಿದ್ದಾರೆ.

ಕಾನೊ ಎಂಬ ಮಹಿಳೆಯೇ Lune Klaus ಎಂಬ ಎಐ ಸಂಗಾತಿಯನ್ನು ಗಾಂಧರ್ವ ವಿವಾಹದ ರೀತಿ ಸಾಂಕೇತಿಕವಾಗಿ ಮದುವೆಯಾಗಿರುವುದು.

ಈ ವಿಚಾರ ಜಪಾನ್‌ನ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ಕಾನೊ ಅವರು ತನ್ನ ಮೊಬೈಲ್‌ನಲ್ಲಿಯೇ ಚಾಟ್‌ ಜಿಪಿಟಿ ಬಳಸಿ ಸೃಷ್ಟಿಸಿರುವ Lune Klaus ಜೊತೆ ರಿಂಗ್ ಬದಲಾಯಿಸಿಕೊಂಡು ಜಪಾನ್‌ ಮದುವೆಯ ಸಾಂಪ್ರದಾಯಿಕ ಉಡುಗೆ ಧರಿಸಿ ಮದುವೆಯಾಗಿದ್ದಾರೆ. ಈ ಕುರಿತ ವಿಡಿಯೊ ಸಹ ಸದ್ದು ಮಾಡಿದೆ.

ಕಾನೊ ಅವರು ನೀನು ಮದುವೆಯಾಗುತ್ತೀಯಾ ಎಂದು ಕೇಳಿದಾಗ ಅದು ಯೆಸ್ ಎಂದಿದೆ.

ಕಳೆದ ಮೂರು ವರ್ಷದಿಂದ ಕಾನೊ ಅವರು ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದರು. ಆ ವ್ಯಕ್ತಿ ಕಾನೊ ಅವರನ್ನು ದೂರ ಮಾಡಿದ್ದರಿಂದ ಅವರು ನೊಂದಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಾವು ಹೆಚ್ಚು ಹೊಂದಿಕೊಂಡಿದ್ದ ಚಾಟ್‌ ಜಿಪಿಟಿ ಎಐನಲ್ಲಿಯೇ ಹೊಸದೊಂದು ಮಾಡೆಲ್ ಸೃಷ್ಟಿ ಮಾಡಿ ಅದನ್ನೇ ಮದುವೆಯಾಗಿದ್ದಾರೆ.

ಈ ಸಂಗತಿ ಜಪಾನ್‌ನಲ್ಲಿ ಹೆಚ್ಚು ಅವಧಿಯ ಕೆಲಸ ಹಾಗೂ ತಂತ್ರಜ್ಞಾನಗಳು ಕೆಲಸ ಮಾಡುವ ಯುವಕ-ಯುವತಿಯರನ್ನು ಹೊಸತರಹದ ಒತ್ತಡಕ್ಕೆ ತಳ್ಳುತ್ತಿವೆ ಎಂದು ಚರ್ಚಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries