ಕಾಸರಗೋಡು: ಕಾಂಗ್ರೆಸ್ ಪಕ್ಷದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ನಡೆದ ವಾಗ್ವಾದ ಹೊಡೆದಾಟದಲ್ಲಿ ಕೊನೆಗೊಂಡಿದೆ. ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಖಂಡರು ಪರಸ್ಪರ ಹೊಡೆದಾಡಿಕೊಂಡಿರುವುದಲ್ಲದೆ, ಈ ದೃಶ್ಯಾವಳಿಯನ್ನು ದೃಶ್ಯ ಮಾಧ್ಯಮವೊಂದಕ್ಕೆ ಕಳುಹಿಸಿಕೊಡಲಾಗಿದ್ದು, ಈ ನೇತಾರನ ವಿರುದ್ಧ ಡಿಸಿಸಿ ಶಿಸ್ತು ಕ್ರಮವನ್ನೂ ಕೈಗೊಂಡಿದೆ.
ಡಿಸಿಸಿ ಉಪಾಧ್ಯಕ್ಷ ಜೇಮ್ಸ್ ಪಂದಮಾಕಲ್ ಹಾಗೂ ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈಸ್ಟ್ ಎಳೇರಿ ಪಂಚಾಯಿತಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸ್ಪರ್ಧಿಸಲು ಸೀಟು ವಿಭಜನೆ ನಡೆಸುವ ವಿಚಾರದಲ್ಲಿ ಹೊಡೆದಾಟ ನಡೆದಿದೆ. ವರ್ಷದ ಹಿಂದೆ ಜೇಮ್ಸ್ ಪಂದಮಾಕಲ್ ಕಾಂಗ್ರೆಸ್ ತೊರೆದು ಡಿಡಿಎಫ್ ಎಂಬ ಸಂಘಟನೆ ರಚಿಸಿದ್ದು, ನಂತರ ನಡೆದ ಮಾತುಕತೆಯಲ್ಲಿ ಜೇಮ್ಸ್ ನೇತೃತ್ವದಲ್ಲಿ ಪಕ್ಷ ತೊರೆದಿದ್ದ ಏಳೂ ಮಂದಿಯನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸಲಾಗಿತ್ತು. ಈ ಸಂದರ್ಭ ಡಿಡಿಎಫ್ ನೇತಾರರು ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಎಲ್ಲಾ ಸದಸ್ಯರಿಗೂ ಸ್ಪರ್ಧಿಸಲು ಅವಕಾಶ ನೀಡಬೇಕೆಂಬ ನಿಬಂಧನೆ ವಿಧಿಸಿದ್ದು, ಇದಕ್ಕೆ ತಯಾರಾಗದಿರುವುದರಿಂದ ವಾಗ್ವಾದ ನಡೆದಿದ್ದು, ಹೊಡೆದಾಟದಲ್ಲಿ ಪರ್ಯವಸಾನಗೊಂಡಿದೆ.
¥





