ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯ ಕಲ್ಯೋಟ್‍ನ ಕುರುಚಲು ಪೊದೆಯ ಸಂದಿಯಲ್ಲಿ ಅವಿತಿರಿಸಲಾಗಿದ್ದ ನಕಲಿ ಕೋವಿಯನ್ನು ಅಬಕಾರಿ ದಳ ಸಿಬ್ಬಂದಿಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಹೊಸದುರ್ಗ ಅಬಕಾರಿ ದಳ ಸಿಬ್ಬಂದಿ ಅನಧಿಕೃತ ಸಾರಾಯಿ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಸಂದರ್ಭ ಕೋವಿ ಪತ್ತೆಯಾಗಿದೆ.
ಕೋವಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಬೇಕಲ ಠಾಣೆ ಎಸ್.ಐ ಪಿ. ಅಖಿಲ್ ನೇತೃತ್ವದ ಪೊಲೀಸರ ತಮಡ ಸ್ಥಳಕ್ಕೆ ಆಗಮಿಸಿ ಕೋವಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 82ಸೆ.ಮೀ ಉದ್ದದ ಕೋವಿಯನ್ನು ಎರಡು ಭಾಗಗಳಾಗಿ ಮಾಡಿ ಪೊದೆಯ ಸಂದಿಯಲ್ಲಿ ಅವಿತಿರಿಸಲಾಗಿತ್ತು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಮಡು ತನಿಖೆ ನಡೆಸುತ್ತಿದ್ದಾರೆ.




