ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿಯ 21ನೇ ವಾರ್ಡಿನಿಂದ ಐಕ್ಯರಂಗದ ಮುಸ್ಲಿಂಲೀಗ್ ವತಿಯಿಂದ ಸ್ಪರ್ಧಿಸುತ್ತಿರುವ ಮಾಹಿನ್ ಕೇಲೋಟ್ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ತುಳು ಭಾಷೆಯಲ್ಲಿ ಬ್ಯಾನರ್ ತಯಾರಿಸಿಕೊಳ್ಳುವ ಮೂಲಕ ತಮ್ಮ ತುಳು ಪ್ರೇಮ ಪ್ರದರ್ಶಿಸಿದ್ದಾರೆ. ಬದಿಯಡ್ಕದಲ್ಲಿ ವರ್ಷಗಳ ಹಿಂದೆ ನಡೆದಿದ್ದ 'ವಿಶ್ವ ತುಳುವೆರೆ ಆಯನ' ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದ ಇವರು ತುಳು ಭಾಷೆಯ ಬಗ್ಗೆ ಹೆಚ್ಚಿನ ಮೋಹಬೆಳೆಸಿಕೊಂಡಿದ್ದರು. ಪ್ರಸಕ್ತ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ತುಳು ಲಿಪಿಯನ್ನುಬಳಸಿ ಬ್ಯಾನರ್ ರಚಿಸುವ ಮೂಲಕ ತುಳುವರ ಮನಗೆಲ್ಲಲು ತಯಾರಿ ನಡೆಸಿದ್ದಾರೆ. ಬದಿಯಡ್ಕ ಗ್ರಾಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಎಂಡೋಸಲ್ಫಾನ್ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದಾರೆ.





